Advertisement

ಸಮಾನ ವೇತನ ನೀಡುವಂತೆ ಆಗ‹ಹ

12:26 PM Oct 04, 2020 | Suhan S |

ದೇವನಹಳ್ಳಿ: ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್‌ ಸಂಘದ ವತಿಯಿಂದ ತಾಲೂಕಿನ ಜಿಲಾಡಳಿತ ಭವನದ ಮುಂಭಾ ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯಲ್ಲಿ ಜಿಲ್ಲಾ ಸದಸ್ಯ ಪ್ರಭಾಕರ್‌ ರೆಡ್ಡಿಮಾತನಾಡಿ, ರಾಜ್ಯದಆರೋಗ್ಯಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾಸಿಕ 8,800ರೂ. ವೇತನನೀಡಲಾಗುತ್ತಿದೆ.ಖಾಯಂನೌಕರರಿಗೆ 25 ಸಾವಿರಕ್ಕೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಸಮಾನಕೆಲಸಕ್ಕೆವೇತನದಲ್ಲಿ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

ಶೇ.70ರಷ್ಟು ಗುತ್ತಿಗೆ ನೌಕರರಿದ್ದು, ಪರಸ್ಪರ ವರ್ಗಾವಣೆ ಹಾಗೂ ಖಾಲಿ ಇರುವ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಬೇಕು. ಖಾಯಂನೇಮಕಾತಿಯಾದ ಕಾರಣದಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯ ಬಾರದು. ಅನಗತ್ಯವಾಗಿ ಸ್ಥಳ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದರು. ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ ಮಾತನಾಡಿ, ಸುಮಾರು 20 ವರ್ಷಗಳಿಂದಸೇವೆ ಸಲ್ಲಿಸಿದರೂ, ಸಮಾನ ವೇತನ ಇಲ್ಲ. 4  ಸಾವಿರ ವೇತನದಿಂದ 12 ಸಾವಿರಕ್ಕೆ ಬಂದು ನಿಲ್ಲಿಸಿದ್ದಾರೆ. 500 ರೂ. ಮಾತ್ರ ಹೆಚ್ಚಿಸಲಾಗು ತ್ತಿದ್ದು, ನಮ್ಮ ಕಾರ್ಯ ವೈಖರಿ, ಖಾಯಂ ನೌಕರರ ಕಾರ್ಯ ವೈಖರಿಯೂ ಒಂದೇ ಇರು ವಾಗಏಕೆ ತಾರತಮ್ಯ ಮಾಡುತ್ತಿದ್ದಾರೆ ಎಂದರು.

ಪ್ರತಿ ಸರ್ಕಾರದಿಂದಲ್ಲೂ ಭರವಸೆ ಮಾತ್ರ ಬರುತ್ತದೆ. ಅದರಂತೆ ಆರೋಗ್ಯ ಸಚಿವಶ್ರೀರಾಮುಲು ಸಹ ಭರವಸೆ ನೀಡಿದ್ದಾರೆ.  ನಮಗೆ ಏಕೆ ಈ ರೀತಿ ಬೇಧ ಮಾಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಜನಸೇವೆ ಮಾಡಲು ಕೂಡಲೇ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟರೆ 50 ಲಕ್ಷ ರೂ. ನೀಡುತ್ತೇವೆಂದು ಹೇಳುತ್ತಾರೆ. ಅದನ್ನು ಬಿಟ್ಟು ಬದುಕಿರುವಾಗಲೇ ಸಮಾನ ವೇತನ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌.ಕೆ.ನಾಯಕ್‌ ಹಾಗೂ ಜಿಪಂ ಸಿಇಒ ಎನ್‌.ಎಂ.ನಾಗರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಜಿಲ್ಲೆಯ ಹೊರಗುತ್ತಿಗೆ ನೌಕರರ ಸಂಘ ಮತ್ತು ಭಾರತೀಯ ಮಜ್ದೂರ್‌ ಸಂಘದೊಂದಿಗೆ ಸಂಯೋಜಿತ(ಬಿಎಂಎಸ್‌)ಪದಾಧಿಕಾರಿಗಳು ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next