Advertisement

ಸುದೀರ್ಘ‌ ಹೋರಾಟದಲ್ಲಿ  ರೈತರಿಗೆ ಸಹಿಸಲಾಗದ ನೋವು

05:13 PM Jul 30, 2018 | |

ನರಗುಂದ: ಕುಡಿಯುವ ನೀರಿಗಾಗಿ ಮಹದಾಯಿ ಯೋಜನೆಗೆ ಒತ್ತಾಯಿಸಿ ಸುದೀರ್ಘ‌ ಹೋರಾಟದುದ್ದಕ್ಕೂ ರೈತರು ಸಹಿಸಲಾಗದ ನೋವು, ಹತಾಶೆ ಎದುರಿಸುವಂತಾಗಿದೆ. ಇಷ್ಟಾದರೂ ಈ ಯೋಜನೆ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಇದೊಂದು ರೈತರ ತಪಸ್ಸಿನ ಹೋರಾಟವಾಗಿದೆ ಎಂದು ಗಂಗಾವತಿ ತಾಲೂಕು ಕಂಪ್ಲಿ ಕರವೇ ಅಧ್ಯಕ್ಷ ಎಂ. ಇಸ್ಮಾಯಿಲ್‌ ಬೇಗ್‌ ವಿಷಾಧಿಸಿದರು.

Advertisement

ಹುತಾತ್ಮ ರೈತ ದಿ| ಈರಪ್ಪ ಕಡ್ಲಿಕೊಪ್ಪರ ವೀರಗಲ್ಲು ಬಳಿ ರವಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ 1110ನೇ ದಿನ ನಿರಂತರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಎಷ್ಟು ವರ್ಷಗಳ ಕಾಲ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕು ಎಂಬ ರೈತರ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದು ಹೇಳಿದರು. ಈ ಹೋರಾಟದುದ್ದಕ್ಕೂ ಆಳುವ ಜನಪ್ರತಿನಿ ಧಿಗಳು, ರಾಜಕಾರಣಿಗಳು, ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ನೋವು ರೈತ ಕುಲವನ್ನು ಬಾ ಧಿಸುತ್ತಿದೆ. ರೈತರ ನೋವು, ನಲಿವಿನಲ್ಲಿ ಭಾಗಿಯಾಗಬೇಕಾದ ಆಳುವ ನಾಯಕರ ಇಚ್ಛಾಸಕ್ತಿ ಕೊರತೆ ಇಡೀ ಅನ್ನದಾತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತನಾಡಿ, ನೀರಿಗಾಗಿ ನಾಲ್ಕನೇ ವರ್ಷದಲ್ಲಿ ಹೋರಾಟ ಮಾಡಿದರೂ ಆಳುವ ನಾಯಕರ ಅಸಡ್ಡೆ ಧೋರಣೆಯಿಂದ ಹೋರಾಟ ಹೋರಾಟವಾಗಿಯೇ ಉಳಿದಿದೆ. ದೇಶದ ಬೆನ್ನೆಲುಬು ರೈತ ಎಂದು ಹೇಳುವ ಸರ್ಕಾರಗಳೇ ರೈತರ ಬೆನ್ನಿಗೆ ನಿಲ್ಲದಿದ್ದರೆ ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.

ಕರವೇ ಘಟಕದ ಖಲೀಲ್‌, ದಾಮೋದರ ತುಳಜಮ್ಮನವರ, ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ, ಕೋಶಾಧ್ಯಕ್ಷ ಫಕೀರಪ್ಪ ಜೋಗಣ್ಣವರ, ಪರಶುರಾಮ ಜಂಬಗಿ, ಹನಮಂತ ಕೋರಿ, ವಿರುಪಾಕ್ಷಪ್ಪ ಪಾರಣ್ಣವರ, ವಾಸು ಚವ್ಹಾಣ, ಯಲ್ಲಪ್ಪ ಗುಡದರಿ, ಈರಣ್ಣ ಗಡಗಿ, ಅರ್ಜುನ ಮಾನೆ, ಎಚ್‌.ಸಿ. ಹಿರೇಹೊಳಿ, ಜಯಪಾಲ ಮುತ್ತಿನ, ಹನಮಪ್ಪ ಪಡೇಸೂರ, ಹನಮಂತ ಸರನಾಯ್ಕರ, ನಾಗರತ್ನ ಸವಳಭಾವಿ, ಅನಸಮ್ಮ ಶಿಂಧೆ, ಬಸಮ್ಮ ಐನಾಪುರ, ಚನ್ನವ್ವ ಕರ್ಜಗಿ, ದೇವಕ್ಕ ತಾಳಿ, ಜನ್ನತಬಿ ಮುಲ್ಲಾನವರ, ಮಾಬೂಬಿ ಕೆರೂರ, ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಶ್ರೀಶೈಲ ಮೇಟಿ, ವೆಂಕಟೇಶ ಸಾಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next