Advertisement

ಕೆರೆ ಸ್ವಚ್ಛಗೊಳಿಸದ ಸರ್ಕಾರದ ಕ್ರಮಕ್ಕೆ ಆಕ್ರೋಶ

12:56 PM May 31, 2017 | Team Udayavani |

ಮಹದೇವಪುರ: ಕಲುಷಿತಗೊಂಡಿದ್ದ ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸುವಂತೆ ಹಸಿರು ನ್ಯಾಯಾಧಿಕರಣ ಬಿಸಿ ಮುಟ್ಟಿಸಿದ ನಂತರವೂ ಕ್ರಮಕ್ಕೆ ಮುಂದಾಗದ ಸರ್ಕಾರದ ವರ್ತನೆ ಖಂಡಿಸಿ ಮಹದೇವಪುರ ಕ್ಷೇತ್ರ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.

Advertisement

ಪ್ರತಿಭಟನೆ ವೇಳೆ ಮಾತನಾಡಿದ ಮಹದೇವಪುರ ಕ್ಷೇತ್ರ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಕೆ.ಸತೀಶ್‌ ಕೋನದಾಸಪುರ, ಕೆರೆ ಸ್ವಚ್ಛತೆ ಬಗ್ಗೆ ಎನ್‌ಜಿಟಿ ಎಚ್ಚರಿಸಿದ ನಂತರ, ನಾಮಕಾವಸ್ತೆಗೆ ಕ್ರಮ ಕೈಗೊಂಡ ಸರ್ಕಾರ, 900 ಎಕರೆ ವಿಸ್ತೀರ್ಣದ ಕೆರೆ ಸ್ವಚ್ಛತೆಗೆ ಕೇವಲ ಎರಡು ಯಂತ್ರ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದು, ತಿಂಗಳು ಕಳೆದರೂ ಶೇ.10ರಷ್ಟೂ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು.

ಕೆರೆ ಸುತ್ತ ಇರುವ ಕೈಗಾರಿಕೆಗಳು ದಶಕಗಳಿಂದ ಸಂಸ್ಕರಿಸದ ರಾಸಾಯನಿಕ ತ್ಯಾಜ್ಯವನ್ನು ಕೆರೆಗೆ ಬಿಡುತ್ತಿದ್ದರೂ ಗಮನಹರಿಸದ ಅಧಿಕಾರಿಗಳು, ಹಸಿರು ನ್ಯಾಯಾಧಿಕರಣದ ಆದೇಶವನ್ನೂ ಸಮರ್ಪಕವಾಗಿ ಪಾಲಿಸುತ್ತಿಲ್ಲ. ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಹೆಚ್ಚಿ, ರಸ್ತೆಗೆ ಹಾರುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ, ಬಿಡಿಎ, ಸರ್ಕಾರ ಸಂಪೂರ್ಣ ವಿಪಲವಾಗಿದೆ ಎಂದು ದೂರಿದರು. ಸೇವಾದಳದ ನಗರಾಧ್ಯಕ್ಷ ಮಹೇಶ್‌, ಉಪಾಧ್ಯಕ್ಷ ನಂಜಾರೆಡ್ಡಿ, ಎಂ.ಬಿ. ಶ್ರೀನಿವಾಸ್‌ ಮುಳ್ಳೂರು, ಎಂ.ಯಲ್ಲಪ್ಪ, ಗಿರೀಶ್‌ ಗೌಡ, ದಿನೇಶ್‌ ಕುಮಾರ್‌ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next