Advertisement

ಪ್ರಧಾನಿ ಪಕೋಡ ಹೇಳಿಕೆಗೆ ಆಕ್ರೋಶ

01:29 PM Feb 05, 2018 | |

ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರುದ್ಯೋಗ ನಿವಾರಣೆಗೆ ಪಕೋಡ ಮಾರಾಟದ ಹೇಳಿಕೆ
ವಿರೋಧಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು
ಬಂಧಿಸಿ ಬಿಡುಗಡೆ ಮಾಡಿದರು.

Advertisement

ರವಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಬ್ದುಲ್‌ ಖಾದರ್‌ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಬಿಜೆಪಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅಬ್ದುಲ್‌ ಖಾದರ್‌, ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ತಮ್ಮ ಮಾತು ಮರೆತಿದ್ದಾರೆ. ಅವರು
ಕೊಟ್ಟ ಮಾತನ್ನು ಖಾಸಗಿ ಸಂಸ್ಥೆಯೊಂದು ಸಂದರ್ಶನದಲ್ಲಿ ಪ್ರಶ್ನಿಸಿದಾಗ ನಿರುದ್ಯೋಗಿ ಪದವೀಧರರು ಪಕೋಡ
ಮಾರಿ ಜೀವನ ನಿರ್ವಹಿಸಲಿ ಎಂಬ ಹೇಳಿಕೆ ನೀಡಿದ್ದು ಭಿಕ್ಷೆ ಬೇಡುವುದು ಕೂಡ ಒಂದು ಉದ್ಯೋಗ ಎಂದು ಹೇಳುವ
ದಿನಗಳು ದೂರವಿಲ್ಲ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಮಹದಾಯಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದರೂ ಸಮಸ್ಯೆ ಇತ್ಯರ್ಥಕ್ಕೆ ಚಕಾರ ಎತ್ತದೇ ನಯವಂಚನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೌಕಕ್ಕೆ ಶರಣಾಗಿದ್ದಾರೆ. ಮತ್ತೂಂದೆಡೆ ರಾಜ್ಯದಲ್ಲಿ ಮಹದಾಯಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ರಾಜ್ಯದ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರೂ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿದ ಸಾಲಮನ್ನಾ ಮಾದರಿಯಲ್ಲಿ ಕೇಂದ್ರ
ಸರ್ಕಾರ ರೈತರು ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುವ ಕುರಿತು ಮೌನ ಮುರಿದಿಲ್ಲ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳ ಸರದಾರರು ಎಂದು ಜರಿದರು. ಯುವ ಕಾಂಗ್ರೆಸ್‌ನ ದೇವರ ಹಿಪ್ಪರಗಿ ಕ್ಷೇತ್ರದ ಅಧ್ಯಕ್ಷ ಸಂಗಮೇಶ ಛಾಯಾಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್‌ ದೇಶಮುಖ ಮಾತನಾಡಿದರು. 

Advertisement

ಉಪಾಧ್ಯಕ್ಷರಾದ ಶ್ರೀಕಾಂತ ಛಾಯಾಗೋಳ, ಲಿಂಬಾಜಿ ರಾಠೊಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ ಪಾಟೀಲ, ಚನ್ನಬಸಪ್ಪ ವಾರದ, ಪ್ರತಾಪ ಬಬಲೇಶ್ವರ, ಅಬುಬಕರ ಬಿಜಾಪುರ, ದೇವೇಂದ್ರ ಚವ್ಹಾಣ, ಬಸನಗೌಡ ಪಾಟೀಲ, ಮೆಹಬೂಬ ಎಂ.ಎಚ್‌.ಎಂ, ಪೈಂಗಬರ್‌ ಹಚ್ಚಾಳ, ಅಕ್ಷಯ, ಬಸವರಾಜ ಬಿರಾದಾರ, ಶಿವನಗೌಡ, ಸಮೀರ, ಅಶ್ರಫ್‌ ಇಂಡಿಕರ, ಮಲ್ಲು ಮಲಘಾಣ, ವಾಸೀಮ ಹುಸೇನ್‌ ನಾಯಕ, ವಾಯಿದ, ವಿಶಾಲ, ಸಾಯಿ, ಆಸೀಫ್‌, ವಸೀಮ, ರಾಜು, ಶುಭಂ, ಶ್ರೀಶೈಲ, ಶಾಬಾದ, ಶಾಯಿದ್‌, ಮುಜಾಹಿದ್ದ, ವಿಕಾಸ, ಅಕ್ಷಯ, ಪ್ರವೀಣ, ಶುಭಂ ಕಳ್ಳಿ, ಸಾಗರ, ಬಾಲು, ರಾಜೇಶ, ಶಾಂತು, ಆನಂದ, ಸತೀಶ, ರಮೇಶ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next