ಭಟ್ಕಳ: ಜಾಲಿ ಪಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಗುಣಮಟ್ಟದ ಕುರಿತು ಆತಂಕ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಶುಕ್ರವಾರ ಸಂಜೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಪ್ರತಿಭಟನೆ ನಡೆಸಿದರು.ಗ್ರಾಮಸ್ಥರು, ಒಳಚರಂಡಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್ ಮ್ಯಾನ್‌ಹೋಲ್ ಕಾಮಗಾರಿಸರಿಯಾಗಿ ಆಗದೇ ಮಳೆಗಾಲದಲ್ಲಿ ನೀರು ಒಳನುಗ್ಗುವ ಸಾಧ್ಯತೆ ಇದೆ.
ಅಲ್ಲದೇ ಕೇವಲ 10 ಇಂಚು ಪೈಪ್ ಅಳವಡಿಸುತ್ತಿದ್ದು ಇದು ಇಲ್ಲಿನ ವಾಸ್ತವ್ಯದ ಮನೆಗಳ ಲೆಕ್ಕಾಚಾರದಂತೆಡಿಸೈನ್ ಮಾಡಿದಂತೆ ಕಂಡು ಬರುತ್ತಿಲ್ಲ. ಇಷ್ಟೊಂದು ಚಿಕ್ಕ ಪೈಪ್ ಅಳವಡಿಕೆಯಿಂದ ಮುಂದೆ ತೀವ್ರ ತೊಂದರೆ ಆಗಲಿದೆ ಎಂದೂ ನಾಗರಿಕರು ದೂರಿದರು. ಅಲ್ಲದೇ ಒಳಚರಂಡಿ ಚೇಂಬರ್‌ನಲ್ಲಿ ಮೊದಲು ಸ್ಥಳಾವಕಾಶ ಇಟ್ಟು ಕೊನೆಗೆ ಪೈಪ್ ಜೋಡಣೆ ಮಾಡುವುದರಿಂದ ಮತ್ತು ಒಳಗಡೆಯಲ್ಲಿ ಸರಿಯಾಗಿ ಸಿಮೆಂಟ್ ಗಾರೆ ಮಾಡದೇ ಇರುವುದರಿಂದ ನೀರು ಲೀಕೇಜ್ ಆಗುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ:ಜಾತಿಗೊಂದು ನಿಗಮ: ಸಮಾಜ ಒಡೆಯುವ ಕೆಲಸ
ಹಾಗೇನಾದರೂ ಆದರೆ ಇಲ್ಲಿನ ನಾಗರಿಕರ ಮನೆಗಳಲ್ಲಿನ ಕುಡಿಯುವ ನೀರಿನ ಬಾವಿಗಳು ಹಾಳಾಗಿ ಮತ್ತೆ ಭಟ್ಕಳ ನಗರದಲ್ಲಿ ಆದ ಅವ್ಯವಸ್ಥೆ ಜಾಲಿ ಪಪಂನಲ್ಲಿ ಆಗಲಿದೆ ಎನ್ನುವುದು ನಾಗರಿಕರ ಆರೋಪವಾಗಿದೆ. ಈ ರೀತಿಯಾಗಿ ಮಾಡುವ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದೂ ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಬಿಡ್ಲೂಎಸ್‌ಎಸ್‌ಬಿ ಇಂಜಿನಿಯರ್ ಶಶಿಧರ ಹೆಗಡೆ ನಾಗರಿಕರೊಂದಿಗೆ ಮಾತನಾಡಿ, ನಾವುಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದು ಇಲ್ಲಿ ಉತ್ತಮ ಸಿಮೆಂಟ್ ಹಾಗೂ ಸಾಮಗ್ರಿ ಬಳಸುತ್ತಿದ್ದೇವೆ. ಒಮ್ಮೆ ಕಾಮಗಾರಿಗಳ ಡಿಸೈನ್ ಒಪ್ಪಿಗೆಯಾಗಿ ಆರಂಭವಾದ ನಂತರ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.
ಕಾಮಗಾರಿ ಕುರಿತು ಯಾವುದೇ ತಕರಾರಿದ್ದರೂಸಹ ಸರಿಪಡಿಸಿಕೊಡಬಹುದು ಎಂದು ಸಮಜಾಯಿಷಿ ನೀಡಿದರು. ಇದರಿಂದ ತೃಪ್ತರಾಗದ ಜನತೆ ಕಾಮಗಾರಿಯಲ್ಲಿ ನಮಗೆ ವಿಶ್ವಾಸವಿಲ್ಲ,ಈಗಾಗಲೇ ಭಟ್ಕಳ ನಗರದಲ್ಲಿನ ನೂರಾರು ಮನೆಗಳವರ ವಾಸನೆಯುಕ್ತ ಬದುಕುನೋಡಿ ನಮಗೆ ಸಾಕಾಗಿದೆ. ಇರುವ ಬಾವಿಗಳನ್ನು, ಕುಡಿಯುವ ನೀರಿನ ಸೆಲೆಯನ್ನು ಬಿಟ್ಟುಕೊಡಲು ನಾವು ತಯಾರಿಲ್ಲ ಎಂದು ಪಟ್ಟು ಹಿಡಿದರು.