Advertisement
ಆಟೋ ಚಾಲಕರ ಫೆಡರೇಷನ್ ಆಫ್ ಆಟೋ ಡ್ರೈವರ್ ಯೂನಿಯನ್ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು.
Related Articles
Advertisement
ಮುಖಂಡ ಮಂಜುನಾಥ್ ಮಾತನಾಡಿ, ಆಟೋ ಚಾಲಕರಿಗೆ ಮನೆ, ಕಾಲನಿ ನಿರ್ಮಿಸಿಕೊಡಬೇಕು. ಜೊತೆಗೆ ದುಬಾರಿ ಆರ್‌ಟಿಒ ಶುಲ್ಕ, ದುಬಾರಿ ವಾಹನ ವಿಮಾ ಪಾಲಿಸಿ ಹೆಚ್ಚಳ ಹಾಗೂ ದುಬಾರಿ ದಂಡ ಭರಿಸಲಾಗದೆ ಚಾಲಕರು ಕಂಗಾಲಾಗಿದ್ದು, ಕೂಡಲೇ ಇವರಿಗೆ ಕಾಲನಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಭವಿಷ್ಯನಿಧಿ, ಪಿಂಚಣಿ ಯೋಜನೆ ಜಾರಿ ಮಾಡಿ: ಸಿಐಟಿಯು ಜಿಲ್ಲಾ ಮುಖಂಡ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ, ಅಸಂಘ ಟಿತ ಕಾರ್ಮಿಕರಾದ ಆಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿ ಹಾಗೂ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು.
ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಸಾರಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಹಾಗೂ ಪಿಂಚಣಿ ಯೋಜನೆ ಜಾರಿ ಮಾಡಿದ್ದು, ಅದೇ ರೀತಿ ಇಲ್ಲೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಆಟೋ ಚಾಲಕರಿಗೆ ಇಎಸ್‌ಐ ಸೌಲಭ್ಯ ನೀಡಲು ತೀರ್ಮಾ ನಿಸಿದ್ದು, ಅದನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಒತ್ತಾ ಯಿಸಿದರು. ಅಪರ ಜಿಲ್ಲಾಧಿಕಾರಿ ಚನ್ನ ಬಸಪ್ಪಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆಟೋ ಚಾಲಕರು ಮತ್ತು ಆರ್‌ಟಿಓ ಅಧಿಕಾರಿಗಳ ಜಂಟಿ ಸಭೆ ಕರೆದು ಇಎಸ್‌ಐ ಸೌಲಭ್ಯ ಸೇರಿದಂತೆ ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಮುಖಂಡರಾದ ಇಂತಿಯಾಜ್ ಪಾಷ, ತಿಮ್ಮೇಗೌಡ, ಸಿದ್ದರಾಮಯ್ಯ, ಪ್ರಕಾಶ್, ಶ್ರೀನಿವಾಸ್, ಲಿಂಗಪ್ಪ ಇತರರಿದ್ದರು.