ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಅಥವಾ ಖಾಸಗಿಯವರಿಗೆ ವಹಿಸಬೇಕು ಎಂದು ಬೊಬ್ಬಿಡುತ್ತಿರುವ ಸಂಸದೆ ಸುಮಲತಾ ಖಾಸಗಿಯವರ ವಕ್ತಾರರೇ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದರಾಗಿ ಸುಮಲತಾ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಯತ್ತ ಗಮನ ನೀಡುವು ದನ್ನು ಬಿಟ್ಟು ಯಾವುದೋ ಒಂದು ಉದ್ದೇಶ ಸಾಧನೆಯ ಮನೋಭಾವದಲ್ಲಿ ಪದೇ ಪದೆ ಕಾರ್ಖಾನೆಯನ್ನು ಖಾಸಗಿಗೆ ವಹಿಸಬೇಕು. ಒಅಂಡ್ ಎಂಗೆ ನೀಡಬೇಕು ಎಂದು ಪ್ರತಿಪಾದಿ ಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ನಯವಾದ ಮಾತಿನಿಂದ ಜಿಲ್ಲೆಯ ಮತದಾರರ ನಂಬಿಕೆ ಯನ್ನೇ ವಂಚಿಸುತ್ತಿದ್ದಾರೆ. ಸ್ವಾಭಿಮಾನದ ಮಾತನಾಡುವ ಸಂಸದರು ಕಾರ್ಖಾನೆಯನ್ನು ಸರ್ಕಾರದಿಂದ ನಡೆಸುವಂತಹ ಸ್ವಾಭಿಮಾನದ ಮಾತನಾಡಬೇಕು ಎಂದು ಕಿಡಿಕಾರಿದರು.
ಸಂಸದೆ ಸುಮಲತಾ ಅವರು ಮೈಷುಗರ್ ಕಾರ್ಖಾನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಯಾವುದೋ ಉದ್ದೇಶ ದಿಂದ ಕಾರ್ಖಾನೆಯನ್ನು ಒ ಆ್ಯಂಡ್ ಎಂ ಮೂಲಕ ಖಾಸಗಿ ಯವರಿಗೆ ವಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮೈಷುಗರ್ ಬಗ್ಗೆ ಇಲ್ಲಿನ ರೈತರಿಗೆ ಅವಿನಾಭಾವ ಸಂಬಂಧವಿದೆ. ಕೇವಲ ಕಬ್ಬು ನುರಿಸಲಷ್ಟೇ ಕಾರ್ಖಾನೆಯನ್ನು ಸ್ಥಾಪಿಸಿಲ್ಲ. ಕಾರ್ಖಾನೆಯಿಂ ದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಕುಟುಂಬ ಗಳ ಏಳಿಗೆಯ ಹಿನ್ನೆಲೆಯಲ್ಲಿ ಕಂಪನಿಯನ್ನು ಹಿರಿಯರು ಆರಂಭಿಸಿದ್ದರು ಎಂದರು.
ಕಳ್ಳರಂತೆ ಮಾತನಾಡ್ತಾರೆ: ರೈತಸಂಘದ ಕೆ. ಬೋರಯ್ಯ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಯ ಚುಕ್ಕಾಣಿ ಹಿಡಿ ದಿದ್ದವರಿಂದ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ. ಆ ಹಗರಣವನ್ನು ಜನಮಾನಸದಿಂದ ದೂರ ಮಾಡಿ ಮುಚ್ಚಿಹಾಕುವ ಒಂದು ಪ್ರಯತ್ನವೇ ಈ ಖಾಸಗೀಕರಣದ ಮೂಲ ಉದ್ದೇಶವಾಗಿದೆ ಎಂದು ಆರೋಪಿಸಿದರು. ಈ ವಿಚಾರದಲ್ಲಿ ಹಿತರಕ್ಷಣಾ ಸಮಿತಿಯ ಉದ್ದೇಶವನ್ನು ಪ್ರಶ್ನಿಸುತ್ತಿರುವ ಕೆಲವರು ಅದರಲ್ಲೂ ಕೆಲವು ಜನಪ್ರತಿನಿಧಿಗಳು ಕಳ್ಳರ ಹಾಗೆ ಮಾತನಾಡುತ್ತಿದ್ದಾರೆ.
ನಮ್ಮ ಸಮಿತಿಯ ಹೋರಾಟ ರೈತರ ಹಿತ ಕಾಯುವುದಷ್ಟೇ ಪ್ರಮುಖವಾಗಿದ್ದು ಯಾವುದೇ ದುರುದ್ದೇಶ ಹೊಂದಿಲ್ಲ ಎಂಬುದನ್ನು ಅರ್ಥಮಾಡಿ ಕೊಳ್ಳಲಿ ಎಂದು ಗುಡುಗಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಗಳಾದ ಕೆ.ಬೋರಯ್ಯ, ಎನ್.ರಾಜು, ಕನ್ನಡ ಸೇನೆಯ ಎಚ್.ಸಿ.ಮಂಜುನಾಥ್, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ರೈತಸಂಘದ ಇಂಡುವಾಳು ಚಂದ್ರಶೇ ಖರ್, ಹೆಮ್ಮಿಗೆ ಚಂದ್ರಶೇಖರ್, ಮುದ್ದೇಗೌಡ, ಕಿರಂಗೂರು ಪಾಪು, ಸುಧೀರ್‌ಕುಮಾರಿ, ಸಿಐಟಿಯುನ ಸಿ.ಕುಮಾರಿ ಉಪಸ್ಥಿತರಿದ್ದರು.