Advertisement

ಕೋವಿಡ್ ಸಂಕಷ್ಟದಲ್ಲೂ ತೆರವು : ನಗರಸಭೆ ವಿರುದ್ದ ಆಕ್ರೋಶ

02:06 PM Jun 12, 2021 | Team Udayavani |

ಬಾಗಲಕೋಟೆ:  ನಗರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು ಕೇಳಿ ಬಂದಿದ್ದು, ನಗರದ ಮುಳಗಡೆ ಪ್ರದೇಶದಲ್ಲಿನ ಶೆಡ್ಗಳನ್ನು ತೆರವುಗೊಳಿಸಲಾಯಿತು.

Advertisement

ಕೋವಿಡ್ ಲಾಕಡೌನ್ ಹಿನ್ನೆಯಲ್ಲಿ ಜನರು ತೀವ್ರ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭಗಳಲ್ಲಿ ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ ಹಾಗೂ ಬಿಟಿಡಿಎ ಕಾರ್ಯಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹಳೆಯ ಅಂಜುಮನ್ ಏರಿಯಾ, ಕಿಲ್ಲಾ ಪ್ರದೇಶಗಳಲ್ಲಿ ಇದ್ದ ಶೆಡ್ ಗಳನ್ನು ನಗರಸಭೆ, ಬಿಟಿಡಿಎ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು. ಈ ವೇಳೆ ಶೆಡನಲ್ಲಿದ್ದ ಮಹಿಳೆಯರು, ಅಧಿಕಾರಿಗಳಿಗೆ ಕೈ ಮುಗಿದು, ಶೆಡ್ ನಾವು ತೆಗೆದುಕೊಳ್ಳುತ್ತೇವೆ. ಜೆಸಿಬಿ ಮೂಲಕ ಹಾಳು ಮಾಡಬೇಡಿ ಎಂದು ಕೇಳಿಕೊಂಡರು. ಕೈ ಮುಗಿದು ಕೇಳಿಕೊಂಡರೂ ಕರಗದ ಅಧಿಕಾರಿಗಳು, ಹಲವು ಶೆಡ್ ಗಳನ್ನು ನೆಲಸಮಗೊಳಿಸಿದರು. ಈ ವೇಳೆ ಕೆಲ ಮಹಿಳೆಯರು ಕಣ್ಣೀರು ಹಾಕಿದರು. ಅಲ್ಲದೇ ಕೊರೊನಾ‌ ಸಂಕಷ್ಟದಲ್ಲಿರುವ ಬಡ ಜನರಿಗೆ ಅಧಿಕಾರಿಗಳು ಈ ರೀತಿ ತೊಂದರೆ ಕೊಡುತ್ತಿರುವುದಕ್ಕೆ ಹಿಡಿಶಾಪ ಹಾಕಿದರು.

ಇದನ್ನೂ ಓದಿ: ಲಾಕ್ ಡೌನ್ : 5 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು 90 ಕಿ.ಮೀ ನಡೆದ ತಾಯಿ.!

ಅಗತ್ಯವೇನಿದೆ :

Advertisement

ಜನರು ಕೋವಿಡ್ ಸಂಕಷ್ಟದಲ್ಲಿದ್ದಾರೆ. ಇಂದು ತೆರವುಗೊಳಿಸದ ಶೆಡ್ ಗಳು ಮುಳುಗಡೆ ಪ್ರದೇಶಗಳಲ್ಲಿ ಇವೆ. ಈ ಶೆಡ್ ಗಳಿಂದ ಯಾರಿಗೂ ತೊಂದರೆ ಇಲ್ಲ. ಆದರೂ, ಶೆಡನಲ್ಲಿ ವಾಸಿಸುವ ಬಡ ಜನರಿಗೆ ತೊಂದರೆ ತೊಂದರೆ ಕೊಡುತ್ತಿದ್ದಾರೆ. ಮುಳುಗಡೆ ಪ್ರದೇಶ ಈ ಶೆಡಗಳನ್ನು ಇಂತಹ ಸಂಕಷ್ಟದಲ್ಲಿ, ಅದರಲ್ಲೂ ಮಳೆಗಾಲ ಶುರುವಾಗುವ ವೇಳೆ ತೀವ್ರ ತೊಂದರೆ ಕೊಡುತ್ತಿರುವುದು ಸರಿಯಲ್ಲ. ಈ ತೊಂದರೆ ಕೊಡುವ ಅಧಿಕಾರಿಗಳಿಗೆ, ಬಡ ಜನರಿಗೆ ಇಷ್ಟೊಂದು ತೊಂದರೆ ಕೊಡುತ್ತಿದ್ದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸುಮ್ಮನೆ ಕುಳಿತಿರುತ್ತಿದು ಬಡ ಜನರ ಶಾಪ ತಟ್ಟಲಿದೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next