ಕುದೂರು: ಅಸಮರ್ಪಕ ವಿದ್ಯುತ್ ಪುರೈಕೆ ಮಾಡು ತ್ತಿರುವ ಬೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಕುದೂರಿನ ನೇಕಾರರು ಮತ್ತು ಸಾರ್ವಜನಿಕರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ 2-3 ತಿಂಗಳಿಂದ ಮನ ಬಂದಂತೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ವಿದ್ಯುತ್ ಅವಲಂಬಿತ ವಿದ್ಯುತ್ ಮಗ್ಗಗಳ ನೇಕಾ ರರು ತೊಂದರೆ ಪಡುವಂತಾಗಿದೆ. ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದರೂ ಸ್ಪಂದಿಸುತ್ತಿಲ್ಲ. 3 ತಿಂಗಳಿಂದ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ಇಲ್ಲದ ಸಬೂಬು ಹೇಳಿ ನುಣುಚ್ಚಿಕೊಳ್ಳುತ್ತಿದ್ದಾರೆ. ನಮಗೆ ನೇಕಾರಿಕೆ ವೃತ್ತಿ ಮಾಡಲು ವಿದ್ಯುತ್ ಅವಶ್ಯಕವಾಗಿದ್ದು, ಸರಿಯಾಗಿ ವಿದ್ಯುತ್ ನೀಡಿ, ಇಲ್ಲ ನಮಗೆ ಸಾಯಲು ನೀವೆ ಸ್ವಲ್ಪ ವಿಷ ಕೂಡಿ ಎಂದು ಕುದೂರಿನ ಬೆಸ್ಕಾಂ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಜೀವನದ ಜೊತೆ ಚೆಲ್ಲಾಟ: ನೇಕಾರ ರಾಮಾಂಜ ನೇಯ ಮಾತನಾಡಿ, ಕುದೂರಿನಲ್ಲಿ ಸಾವಿರಾರು ಕುಟುಂಬಗಳು ವಿದ್ಯುತ್ ಮಗ್ಗ ನೇಕಾರಿಕೆಯನ್ನು ನಂಬಿದ್ದು, ಕುದೂರಿನ ಬೆಸ್ಕಾಂ ಅಧಿಕಾರಿಗಳು ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಬೇಕಾಬಿಟ್ಟಿ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಮೂರು ತಿಂಗಳಿಂದ ಕುದೂರಿನ ನೇಕಾರರು ಈ ಸಮಸ್ಯೆ ಎದುರಿಸುತ್ತಿದ್ದೇವೆ. ಕುದೂರು ಬೆಸ್ಕಾಂ ಯಾವ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬೆಸ್ಕಾಂ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಇದಕ್ಕೂ ನಮಗೂ ಯಾವುದೇ ಸಂಬಂದವಿಲ್ಲದಂತೆ ಜಾಣ ನಿದ್ದೆಗೆ ಜಾರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ: ಮುಖಂಡ ಕೆ.ಬಿ.ಚಂದ್ರುಶೇಖರ್ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಆದರೂ, ವಿದ್ಯುತ್ ನೀಡ ಲು ವಿಫಲರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಸರಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ವಿದ್ಯುತ್ ಇಲ್ಲದೆ ಗ್ರಾಮೀಣ ಜನರ ಬದುಕು ದುಸ್ತರವಾಗಿದೆ. ಇಲ್ಲಿರುವ ದಪ್ಪ ಚರ್ಮದ ಅಧಿಕಾರಿಗಳನ್ನು ಬೇರೆಡೆ ವರ್ಗ ಮಾಡಿ, ಬೇರೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ವಿದ್ಯುತ್ ಸರಿಯಾಗಿ ನೀಡದಿದ್ದರೆ ಕುದೂರು ಬಂದ್ ಮಾಡಿ, ಮೇಲಧಿಕಾರಿಗಳು ಬರುವ ತನಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ನೇಕಾರ ವೃತ್ತಿ ನಂಬಿ ನಿತ್ಯ ಜೀವನ ಮತ್ತು ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಈ ವೃತ್ತಿಯನ್ನು ನಂಬಿ ಜೀವನದ ಬಂಡಿ ಸಾಗಿಸಲು ಸಾಲ ಮಾಡಿದ್ದೇವೆ. ಬೇಕಾಬಿಟ್ಟಿ ವಿದ್ಯುತ್ ಕಡಿತಗೊಳಿಸಿದರೆ, ನಾವು ಜೀವನ ನೆಡೆಸು ವುದು ಹೇಗೆ. ನಮ್ಮ ಕುಟುಂಬ ನಿರ್ವಹಣೆ ಮಾಡಿ, ಸಾಲ ತೀರಿಸುವುದು ಹೇಗೆ? ಬೆಸ್ಕಾಂ ಮುಂದೆ ಪೆಟ್ರೋಲ್ ಸುರಿದುಕೊಮಡು ಆತ್ಮಹತ್ಯೆ ಮಾಡಿಕೊಳ್ಳ ಬೇಕಾಗುತ್ತದೆ ಎಂದು ನೇಕಾರರು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಇಇ ಮಂಜುನಾಥ್ ಮಾತ ನಾಡಿ, ಹತ್ತು ದಿನಗಳ ಕಾಲ ನೀಡಿ, ನಾನೇ ಖುದ್ದು ನಿಂತು ನಿಮ್ಮಗಳ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಇನ್ನು ಮುಂದೆ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕುದೂರಿನ ಉಪಾಧ್ಯಕ್ಷರಾದ ಕೆ.ಬಿ.ಬಾಲರಾಜು, ಲಕ್ಷ್ಮಿನಾರಾಯಣ್, ಪದ್ಮನಾಬ್ ಶಕ್ತಿ ವೆಂಕಟೇಶ್, ಕಲಾವಿದ ವೆಂಕಟೇಶ್, ಕಿಟ್ಟಣ್ಣ, ಗಂಗಣ್ಣ, ಸೋಮೇಶ್, ಗೋಪಿ, ಚಂದ್ರುಶೇಖರ್ ಹಾಜರಿದ್ದರು.