Advertisement
ಶ್ರೀಕ್ಷೇತ್ರದಲ್ಲಿ ಜನಸಂದಣಿ ನಿಯಂತ್ರಣಕ್ಕೆ ಹಾಗೂ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟಿಡಿಬಿ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಖಂಡಿಸಿ ಹೊಸದಿಲ್ಲಿಯಲ್ಲಿ ಸಂಸತ್ ಭವನದ ಎದುರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸದಸ್ಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆರ್‌ಎಸ್‌ಪಿ ಸಂಸದ ಎನ್.ಕೆ. ಪ್ರೇಮಚಂದ್ರನ್ ಕೂಡ ರಾಜ್ಯಸಭೆಯಲ್ಲಿ ಈ ಅಂಶವನ್ನು ಪ್ರಸ್ತಾಪಿವಿ ಗಮನ ಸೆಳೆದಿದ್ದಾರೆ.
ಶಬರಿಮಲೆಯಲ್ಲಿ ಭಕ್ತರ ಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ವಾಹನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಪಂಪಾ ನದಿ ತೀರದಲ್ಲಿ ಸತತ ಐದು ದಿನಗಳಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಟಿಡಿಬಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related Articles
Advertisement
ಭಕ್ತರಿಗಾಗಿ ಪಂಪಾದಿಂದ ನಿಳಕ್ಕಲ್‌ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷವಾಗಿ 654 ಬಸ್‌ಗಳನ್ನು ಮೀಸಲಿಟ್ಟರೂ ಅದರ ಪೂರ್ಣ ಬಳಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಸೂಕ್ತ ಸೌಲಭ್ಯ ಕಲ್ಪಿಸುವಂತೆ ಸೂಚನೆಶಬರಿಮಲೆ ಯಲ್ಲಿ ತೀವ್ರಗೊಂಡಿರುವ ಭಕ್ತರ ಸಂದಣಿ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳ ವಾರ ವಿಶೇಷ ಸಭೆ ನಡೆಸಿದರು. ಸಭೆಯಲ್ಲಿ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್, ಅರಣ್ಯ ಸಚಿವ ಶಶಿಧರನ್, ಸರಕಾರದ ಮುಖ್ಯ ಕಾರ್ಯದರ್ಶಿ, ಟಿಡಿಬಿ ಅಧ್ಯಕ್ಷರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭಾಗಹಿಸಿದ್ದರು. ಈ ವೇಳೆ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಕೇರಳ ಸಿಎಂ ಸೂಚಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, “ಮಂಡಲ ಪೂಜೆ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಭಕ್ತರ ಸಂದಣಿ ಹೆಚ್ಚಿದೆ. ವಿಪಕ್ಷಗಳು ಸುಖಾಸುಮ್ಮನೆ ಈ ವಿಷಯ ವನ್ನು ವಿವಾದ ಮಾಡುತ್ತಿವೆ” ಎಂದು ಹೇಳಿದರು. ವರ್ಚುವಲ್ ಬುಕಿಂಗ್ ಇದ್ದವರಿಗೆ ಮಾತ್ರ ಪ್ರವೇಶ: ಹೈಕೋರ್ಟ್ ಸೂಚನೆ
ವರ್ಚುವಲ್ ಬುಕ್ಕಿಂಗ್ ಅಥವಾ ಸ್ಥಳದಲ್ಲೇ ನೋಂದಣಿಯಾಗದ ಭಕ್ತರಿಗೆ ದೇಗಲ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಕೇರಳ ಸರಕಾರಕ್ಕೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ. 12 ಗಂಟೆಗಳಿಗಿಂತಲೂ ಹೆಚ್ಚು ಕಾಲ ಸರತಿಯಲ್ಲಿ ನಿಲ್ಲಬೇಕಾದ ಅನಿವಾರ್ಯದ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ನಿರ್ದೇಶನ ನೀಡಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಕಾಲೇಜುಗಳು ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಕೆಡೆಟ್‌ಗಳ ಸಹಾಯ ಪಡೆಯುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ(ಟಿಡಿಬಿ) ಹೈಕೋರ್ಟ್ ನಿರ್ದೇಶನ ನೀಡಿದೆ. ಇದೇ ವೇಳೆ ಪಂಪಾದಿಂದ ಶಬರಿಮಲೆ ದೇಗುಲದವರೆಗೆ ಸ್ವತ್ಛತೆ ಕಾಪಾಡುವಂತೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಟಿಡಿಬಿಗೆ ಹೈಕೋರ್ಟ್ ಸೂಚಿಸಿದೆ. ವಾರಾಂತ್ಯದಲ್ಲಿ ಹಠಾತ್ ಆಗಿ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಿಶೇಷವಾಗಿ 5ರಿಂದ 10 ವರ್ಷದವರ ಮಕ್ಕಳು ಹೆಚ್ಚಾಗಿ ಬಂದಿದ್ದಾರೆ. ಸರತಿಯಲ್ಲಿ ನಿಂತಿರುವ ಭಕ್ತರಿಗಾಗಿ 42 ಲಕ್ಷ ಬಿಸ್ಕತ್‌ಗಳನ್ನು ಆರ್ಡರ್ ಮಾಡಲಾಗಿದೆ. ಜತೆಗೆ ಕಾಫಿ, ಕುಡಿಯಲು ಬಿಸಿನೀರು ವ್ಯವಸ್ಥೆ ಮಾಡಲಾಗಿದೆ.
ಪಿ.ಎಸ್. ಪ್ರಶಾಂತ್, ಟಿಡಿಬಿ ಅಧ್ಯಕ್ಷ