ಸುರಪುರ: ಕೇಂದ್ರ ಸರ್ಕಾರದ ಜನ ವಿರೋಧಿ, ಆರ್ಥಿಕ ನೀತಿ ಖಂಡಿಸಿ ಆ. 9ರಂದು ಕರೆ ನೀಡಿರುವ ಜೈಲ್
ಭರೋ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿರುವ ಜಾಗೃತಿ ಜಾಥಾಕ್ಕೆ ಸೋಮವಾರ ನಗರದ ಅಂಬೇಡ್ಕರ್
ವೃತ್ತದಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಪ್ರಮುಖ ಚೆನ್ನಪ್ಪ ಆನೆಗುಂದಿ, ದಾವುಲ್ ಸಾಬ್ ನದಾಪ್ ಮಾತನಾಡಿ, ಜೈಲೋ ಭರೋ ಕಾರ್ಯಕ್ರಮದ ಭಾಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಾಥಾವು
ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಆ. 9ರ ಹೋರಾಟದ ಕುರಿತಂತೆ ಪ್ರಚಾರ ಮಾಡಲಿದೆ. ಗ್ರಾಮೀಣಿಗರಿಗೆ ಕೇಂದ್ರ
ಸರ್ಕಾರದ ಜನ ವಿರೋಧಿ ಕುರಿತಂತೆ ತಿಳಿಸಲಾಗುವುದು ಎಂದರು.
ಕೇಂದ್ರ ಸರಕಾರ ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಗಾಳಿಗೆ ತೂರಿದೆ. ನಾಲ್ಕುವರೇ ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಬೇಡಿಕೆ ಈಡೇರಿಸದೆ ಮತದಾರರಿಗೆ ನಂಬಿಕೆ, ವಿಶ್ವಾಸ ದ್ರೋಹ ಎಸಗಿದೆ. ಈ ಹಿನ್ನೆಲೆಯಲ್ಲಿ ಆ. 9ರಂದು ದೇಶಾದ್ಯಂತ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಆ. 9ರಂದು ಬೆಳಗ್ಗೆ 11:00 ಗಂಟೆಗೆ ಡಾ| ಆರ್. ಅಂಬೇಡ್ಕರ್ ವೃತ್ತದಿಂದ ನಗರದ ಪ್ರಮುಖ ಬೀದಿಗಳ ಮುಖಾಂತರ ತಹಶೀಲ್ದಾರ್ ಕಾರ್ಯಾಲಯದ ವರೆಗೆ ಪ್ರತಿಭಟನೆ, ಮೆರವಣಿಗೆ ನಡೆಸಲಾಗುವುದು ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ, ಸಿಐಟಿಯ ಜಿಲ್ಲಾ ಪ್ರಮುಖರಾದ ಸುರೇಖಾ ಕುಲಕರ್ಣಿ, ಬಸಮ್ಮ
ಆಲ್ಹಾಳ, ನಸೀಮಾ ಮುದೂ°ರು, ದಲಿತ ಸಂಘಟನೆ ಮುಖಂಡ ಮಹೇಶ ಕರಡಕಲ್ ಸೇರಿದಂತೆ ಇತರರು
ಇದ್ದರು.