Advertisement

ಸಚಿವರಿಂದ ಕ್ಷೇತ್ರದ ಅಭಿವೃದ್ಧಿ ಕಡೆಗಣನೆ

12:48 PM Apr 20, 2018 | Team Udayavani |

ತಿ.ನರಸೀಪುರ: ಅಧಿಕಾರದ ಅಹಂನಲ್ಲಿ ಕ್ಷೇತ್ರದ ಜನರನ್ನು ಕಡೆಗಣಿಸಿದ್ದರಿಂದ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತದಾರರ ಮೇಲಿನ ವಿಶ್ವಾಸ ಮತ್ತು ಕಾರ್ಯಕರ್ತರ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಕ್ಷೇತ್ರ ಉಸ್ತುವಾರಿ ಬಿ.ಆರ್‌.ಪುಟ್ಟಸ್ವಾಮಿ ಹೇಳಿದರು.

Advertisement

ಪಟ್ಟಣದ ಬಿಎಸ್ಪಿ$ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಅಧಿಕಾರವಿದ್ದಾಗ ಜನರನ್ನು ಇರುವೆಗಳಿಗಿಂತಲೂ ಕಡೆಯಾಗಿ ಕಂಡದ್ದರಿಂದ ಸರ್ಕಾರದ ಅಂತ್ಯಕಾಲ ಸಮೀಪವಾಗಿ ಚುನಾವಣೆ ಬರುತ್ತಿದ್ದಂತೆ ಜನರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರು ಸಚಿವರ ಕೈಗೆ ಸಿಗುತ್ತಿಲ್ಲವೆಂದು ಟೀಕಿದರು.

ಸಚಿವ ಮಹದೇವಪ್ಪ ಅವರಿಂದ ಉಪಕಾರವನ್ನು ಪಡೆದುಕೊಂಡವರೂ ಕೂಡ ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿಯನ್ನು ನೋಡಿದಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ದುರ್ಬಲವಾಗಿರುವುದು ತಿಳಿಯುತ್ತದೆ. ಜೆಡಿಎಸ್‌ ಮತ್ತು ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಸಂಘಟಿತರಾಗಿ ದುಡಿಯಬೇಕು. ಜೆಡಿಎಸ್‌ ಕಾರ್ಯಕರ್ತರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಗೆಲ್ಲಲಿಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಪುಟ್ಟಸ್ವಾಮಿ ಕರೆ ನೀಡಿದರು.

ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಕೆ.ಎನ್‌.ಪ್ರಭುಸ್ವಾಮಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನೇಕ ಅಭ್ಯರ್ಥಿಗಳು ಸ್ಪರ್ಧಿಸಿ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ಅಷ್ಟೂ ಮತಗಳನ್ನು  ಜೆಡಿಎಸ್‌ ಅಭ್ಯರ್ಥಿಗೆ ಕೊಡಿಸಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಲ ಪ್ರದರ್ಶಿಸಬೇಕು ಎಂದು ಹೇಳಿದರು. 

25ಕ್ಕೆ ಮಾಯಾವತಿ ಆಗಮನ: ಮೈಸೂರು ನಗರಕ್ಕೆ ಏ.25ಕ್ಕೆ ಪಕ್ಷದ ವರಿಷ್ಠರಾದ ಮಾಜಿ ಸಿಎಂ ಮಾಯಾವತಿ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ತಾಲೂಕಿನಿಂದಲೂ ಕನಿಷ್ಠ 10 ಬಸ್‌ಗಳಲ್ಲಿ  ಜನರನ್ನು ಕರೆದೊಯ್ಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಎನ್‌.ಶಿವಪ್ರಕಾಶ್‌, ಸದಸ್ಯ ಪುಟ್ಟಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್‌.ಆರ್‌.ರಾಜಶೇಖರ್‌, ಜಿಲ್ಲಾ ಸಂಘಟನಾ ಸಂಚಾಲಕ ಬನ್ನಳ್ಳಿ ಸೋಮಣ್ಣ,

Advertisement

ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ಕ್ಷೇತ್ರಾಧ್ಯಕ್ಷ ಎಸ್‌.ಕೆ.ರಾಜೂಗೌಡ, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಉಪಾಧ್ಯಕ್ಷರಾದ ನಾಜೀರ್‌, ಸೀನಪ್ಪ, ಮುಖಂಡರಾದ ಇಮ್ರಾನ್‌, ಕೆಬ್ಬೇಹುಂಡಿ ನಾಗರಾಜು, ಪುಟ್ಟಸ್ವಾಮಿ, ಮಹೇಂದ್ರ, ಕರೋಹಟ್ಟಿ ನಟರಾಜು, ಪ್ರವೀಣ್‌, ಮರಿಮಾದಯ್ಯ, ಶಿವಮೂರ್ತಿ, ಜಗದೀಶ, ಮಹದೇವ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next