Advertisement

ಗ್ರಾಮೀಣ ಪ್ರದೇಶಕ್ಕೆ ಶೇ.65ರಷ್ಟು ಅನುದಾನ ಮೀಸಲಿಡಿ

05:01 PM Dec 18, 2017 | Team Udayavani |

ಕುದೂರು: ಬಜೆಟ್‌ನಲ್ಲಿ ಶೇ.65ರಷ್ಟು ಅನುದಾನ ಗ್ರಾಮೀಣ ಪ್ರದೇಶಕ್ಕೆ ಮೀಸಲಿಡಬೇಕು. ಕೋಟ್ಯಂತರ ಜನರ ತುತ್ತಿನ ಚೀಲ ತುಂಬಿಸುವ ಶಕ್ತಿ ಇರುವುದು ಅನ್ನದಾತನಿಗೆ ಮಾತ್ರ ಆದ ಕಾರಣ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಸಿಂಹ ಪಾಲು ದೊರೆಯಬೇಕು ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

Advertisement

ಕುದೂರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಸ್‌ ನಿಲ್ದಾಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏರ್ಪಡಿಸಿದ್ದ ಕುದೂರು ಹೋಬಳಿ ರೈತ ಸಂಘದ ಘಟಕಕ್ಕೆ ಚಾಲನೆ ನೀಡಿದ ಮಾತನಾಡಿದರು.

ರಾಜ್ಯ ಸರಕಾರದ ಬಜೆಟ್‌ ಗಾತ್ರ ಏರಿಕೆಯಾಗುತ್ತಿದೆ ಅಂತ ಎಲ್ಲಾ ಮುಖ್ಯ ಮಂತ್ರಿಗಳು ಬೊಬ್ಬೆ ಹೊಡೆಯುತ್ತಾರೆ. ಆದರೆ ಬಜೆಟ್‌ ಅನುದಾನದ ಮಾತ್ರ ರೈತರ ಬದುಕಿಗೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.

ಹೆಂಡಕ್ಕೆ ಮತ ಮಾರಿಕೊಳ್ಳಬೇಡಿ: ರಾಗಿಗೆ ಬೆಂಬಲ ನೀಡದೆ ರಾಜ್ಯ ಸರಕಾರ ಯಾಮಾರಿಸಿದೆ. ರೈತರು ಅಮಾಯಕರು ಎಂದು ಯಾವ ರಾಜಕಾರಣಿಗಳು ರೈತರಿಗಾಗಿ ಯೋಜನೆ ರೂಪಿಸಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜಕಾರಣಿಗಳು ನಿಮ್ಮ ಮನೆ ಬಾಗಿಲಿಗೆ ಬಂದರೆ ಸಾಲ ಮನ್ನಾ ಏನು ಮಾಡಿದಿರಿ ಎಂದು ಪ್ರಶ್ನಿಸಿ? ಹೆಂಡ, ಕನಕಾಂಬರ ನೋಟಿಗೆ ವೋಟು ಮಾರಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಬರಗಾಲ, ಅಕಾಲಿಕ ಮಳೆ ಮತ್ತು ದೈನಂದಿನ ಜೀವನ ಸಾಗಿಸಲು ರೈತರ ಬಳಿ ಹಣವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಹೊಣೆ ಸರ್ಕಾರದ ಮೇಲಿದೆ. ರಾಜ್ಯದ ಮೂರು ಪಕ್ಷಗಳು ರೈñ ‌ಪರ ನಿಲುವನ್ನು ತೆಗೆದು ಕೊಳ್ಳುವುದರಲ್ಲಿ ವಿಫ‌ಲವಾಗಿವೆ ಎಂದು ದೂರಿದರು.

Advertisement

ನಂತರ ಆದಿ ಚುಂಚನಗಿರಿ ಶಾಖಾ ಮಠದ ಅನ್ನದಾನನಾಥ ಸ್ವಾಮೀಜಿ ಮಾತನಾಡಿ, ಮನೆಗಳಲ್ಲಿ ನಾಟಿ ಹಸುಗಳನ್ನು ಕಟ್ಟಿ ಪಶುಪಾಲನೆ ಮಾಡಿ, ರೈತರು ಬೆಳೆದ ಬೆಳೆಗೆ ಸರ್ಕಾರ ಕನಿಷ್ಠ ಪಕ್ಷ ಬೆಂಬಲ ಬೆಲೆ ನೀಡುವಂತಾದರೆ ಸಾಕು. ಕೃಷಿಗೆ ನೀರು, ವಿದ್ಯುತ್‌ ನೀಡಿದರೆ ನಮ್ಮ ರೈತರು ಚಿನ್ನದ ಬೆಳೆ ಬೆಳೆದು ತೆಗೆದು ತೋರಿಸಲಿದ್ದಾರೆ ಎಂದ ಅವರು, ರೈತ ಸಂಘದ ಯಾವುದೇ ಚಳುವಳಿಗಳಿಗೂ ರಾಜ್ಯದ ಮಠಮಾನ್ಯಗಳ ಸಾಥ್‌ ನೀಡಲಿ ಎಂದರು.

ಗದ್ದಿಗೆ ಮಠದ ಮಹಂತ ಶ್ರೀಗಳು ಮಾತನಾಡಿ, ರೈತರು ಕೃಷಿಯೊಂದಿಗೆ ಆತ್ಮ ತೃಪ್ತಿಯಿಂದ ಜೀವನ ನಡೆಸಬೇಕು ಮತ್ತು ಆರೋಗ್ಯ ಶುಚಿತ್ವ ಕಾಪಾಡಿಕೊಳ್ಳಬೇಕು. ಶ್ರದ್ಧೆಯಿಂದ ಕಾಯಕ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕುದೂರು ಹೋಬಳಿ ರೈತರಿಗೆ ಗುರುತಿನ ಚೀಟಿ ವಿತರಣೆ ಮತ್ತು ಹೋಬಳಿಯ ಪ್ರಗತಿ ಪರ ರೈತರು, ಹಾಲು ಉತ್ಪಾದಕ ಮಹಿಳೆಯರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ತಾಲೂಕು ಅಧ್ಯಕ್ಷ ಗೋವಿಂದರಾಜು, ಕುದೂರು ಹೋಬಳಿ ರೈತ ಸಂಘದ ಅಧ್ಯಕ್ಷ ಕೆ.ಆರ್‌ ಮಂಜುನಾಥ್‌, ಕುದೂರು ಗ್ರಾಪಂ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಗೌರವಾಧ್ಯಕ್ಷ ವಿಶ್ವನಾಥ್‌ರಾವ್‌, ಕುತ್ತಿನಗೆರೆ ಗಂಗರಾಜು, ಭೈರೇಗೌಡ, ಗಿರೀಶ್‌, ಶಿವಣ್ಣ, ಮುನಿಸ್ವಾಮಿ, ಆನಂದ್‌, ಮರೀಗೌಡ, ನಾರಾಯಣಪ್ಪ, ಬಾಳೇಗೌಡ, ಪದಾಕಾರಿಗಳು,ರೈತರು ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next