Advertisement
ಈ ಸಂಬಂಧ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಸೋಂಕಿತರು ವಿವಿಧ ಜಿಲ್ಲೆಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಬರುವ ಸಂದರ್ಭದಲ್ಲಿಮಾಹಿತಿ ನೀಡದೆಇರುವುದರಿಂದ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ, ಒಂದು ನಿರ್ದಿಷ್ಟ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
Related Articles
Advertisement
ನಿತ್ಯ 50 ಸಾವಿರ ಮಂದಿ ಕೋವಿಡ್ ಪರೀಕ್ಷೆಗೆ ಸಿದ್ಧತೆ :
ಬೆಂಗಳೂರು: ನಗರದಲ್ಲಿ ಮುಂದಿನ ದಿನಗಳಲ್ಲಿ ನಿತ್ಯ 50 ಸಾವಿರ ಜನರನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಉಳಿದ ನಗರಗಳಿಗಿಂತ ಹೆಚ್ಚು ಸೋಂಕು ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ,ನಿತ್ಯಹೆಚ್ಚುಸೋಂಕುಪ್ರಕರಣಗಳು ದೃಢಪಡುತ್ತಿವೆ. ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಸೋಂಕಿತರನ್ನು ಪ್ರತ್ಯೇಕಿಸಿ, ಉಳಿದವರಿಗೆ ಸೋಂಕು ಹಬ್ಬುವುದಕ್ಕೆ ಕಡಿವಾಣ ಹಾಕಬಹುದು. ಸೂಚ್ಯಾಂಕದ ಮಾದರಿಯಲ್ಲಿ ನಗರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿ, ನಂತರದಲ್ಲಿ ಇಳಿಕೆ ಕಾಣಲಿದೆ. ಸೋಂಕು ದೃಢಪಡುವ ಪ್ರಕರಣಗಳ ಸಂಖ್ಯೆಯ 10ರಷ್ಟು ಹೆಚ್ಚು ಸೋಂಕು ಪರೀಕ್ಷೆ ಮಾಡಬೇಕು ಎಂಬ ನಿರ್ದೇಶನ ಇದೆ. ಈ ರೀತಿಮಾಡುವುದರಿಂದ ಸೋಂಕು ಪ್ರಮಾಣ ಇಳಿಕೆಯಾಗಲಿದೆ.ಕೋವಿಡ್ ಕೇರ್ ಸೆಂಟರ್ ಅವಶ್ಯವಿದ್ದರೆ ಹೆಚ್ಚಿಸಲಾಗುವುದು ಎಂದರು.
ವಿಶ್ಲೇಷಣೆಗೆ ಮತ್ತಷ್ಟು ಕಮಿಟಿ: ನಗರದಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಡೆತ್ ಅನಾಲಿಸಸ್ (ಸೋಂಕಿನಿಂದ ಮೃತಪಟ್ಟ ಪ್ರಕರಣಗಳ ವಿಶ್ಲೇಷಣೆ)ಕಮಿಟಿ ರಚನೆ ಮಾಡಲಾಗಿದೆ. ಈ ಕಮಿಟಿ ವರದಿ ನೀಡಿದ ಆಧಾರದಮೇಲೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು