Advertisement
ಈ ಪಂದ್ಯದಲ್ಲಿ ಚೀನಾವನ್ನು ಝಾಂಗ್ ಝಿಜಿ ಪ್ರತಿನಿಧಿಸಿದರೆ ಜಪಾನ್ ತಂಡವನ್ನು ಕಜುಮಾ ಕವಾನಾ ಪ್ರತಿನಿಧಿಸಿದ್ದರು. ಪಂದ್ಯದ ವೇಳೆ ಚೀನಾ ಆಟಗಾರ ಹೃದಯಾಘಾತಗೊಂಡು ಅಂಗಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದೀಗ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪಂದ್ಯಾವಳಿ ಆಯೋಜಕರ ವಿರುದ್ಧ ವ್ಯಾಪಕ ಆಕ್ರೋಶವೂ ಹೊರಹೊಮ್ಮಿದೆ.
ಭಾನುವಾರ ಸಂಜೆ ಜಪಾನ್‌ನ ಕಜುಮಾ ಕವಾನಾ ವಿರುದ್ಧದ ಸಿಂಗಲ್ಸ್ ಪಂದ್ಯದಲ್ಲಿ ಝಾಂಗ್ ಝಿಜಿ ಆಡುತ್ತಿದ್ದರು. ಮೊದಲ ಸುತ್ತಿನ ಪಂದ್ಯಾವಳಿ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಝಾಂಗ್ ಝಿಜಿ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ ಈ ವೇಳೆ ಮೈದಾನದಲ್ಲಿಯೇ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಬ್ಯಾಡ್ಮಿಂಟನ್ ಏಷ್ಯಾ ಮತ್ತು ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ (PBSI) ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು
Related Articles
Advertisement