ನವದೆಹಲಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು ದೆಹಲಿ ಜನತೆ ಭಯಭೀತರಾಗಿದ್ದಾರೆ, ಶನಿವಾರ(ಡಿ.7) ಮುಂಜಾನೆ ವಾಕಿಂಗ್ ಹೋಗಿದ್ದ ಉದ್ಯಮಿಯನ್ನು ಬೈಕ್ ನಲ್ಲಿ ಬಂದ ಅಪರಿಚಿತರ ತಂಡ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಈಶಾನ್ಯ ದೆಹಲಿಯ ಶಹದಾರಾದಲ್ಲಿ ನಡೆದಿದೆ.
ಹತ್ಯೆಗೀಡಾದ ಉದ್ಯಮಿಯನ್ನು ಕೃಷ್ಣ ನಗರದ ನಿವಾಸಿ ಉದ್ಯಮಿ ಸುನಿಲ್ ಜೈನ್ ಎಂದು ಗುರುತಿಸಲಾಗಿದ್ದು, ಸುನಿಲ್ ಅವರು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬೆಳಗಿನ ವಾಕ್ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವ ವೇಳೆ ಬೈಕ್ ನಲ್ಲಿ ಬಂಡ ದುಷ್ಕರ್ಮಿಗಳ ತಂಡ 7–8 ಸುತ್ತು ಗುಂಡು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುನಿಲ್ ಅವರು ಕಳೆದ ಹಲವು ವರ್ಷಗಳಿಂದ ಪಾತ್ರೆ ವ್ಯಾಪಾರವನ್ನು ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಟುಂಬ ಸದಸ್ಯರ ಮಾಹಿತಿಯಂತೆ ಸುನಿಲ್ ಅವರು ಯಾರೊಂದಿಗೂ ದ್ವೇಷ ಹೊಂದಿಲ್ಲ, ಅಲ್ಲದೆ ಅವರಿಗೆ ಯಾರೂ ವೈರಿಗಳೂ ಇರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ಈ ಪ್ರದೇಶದಲ್ಲಿ ಇದೇ ರೀತಿಯ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡಿದ್ದ ಆದರೆ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು ದೆಹಲಿ ಜನತೆ ಜೀವ ಭಯದಲ್ಲಿ ಜೀವಿಸುವಂತಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Mangaluru: ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡು ಹಾಡಿ ಕರಾವಳಿ ಜನರ ಮನ ಗೆದ್ದ ಡಿಸಿ