ಹೊಸದಿಲ್ಲಿ : ‘ನಾವು ರಾಹುಲ್ ಗಾಂಧಿಯನ್ನು ತಬ್ಬಿಕೊಂಡರೆ ನಮ್ಮ ಹೆಂಡತಿ ನಮಗೆ ಡೈವೋರ್ಸ್ ಕೊಟ್ಟಾಳು’ ಎಂಬ ಭಯವನ್ನು ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ವೇಳೆ ಪ್ರದಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಲ್ಲರೂ ಅಚ್ಚರಿ ಪಡುವಂತೆ ತಬ್ಬಿಕೊಂಡ ಘಟನೆಗೆ ನಿಶಿಕಾಂತ್ ದುಬೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
“ಒಂದೊಮ್ಮೆ ರಾಹುಲ್ ಗಾಂಧಿ ಮದುವೆಯಾದಲ್ಲಿ ನಾವು ಅವರನ್ನು ತಬ್ಬಿಕೊಳ್ಳಬಹುದಾಗಿದೆ’ ಎಂದು ದುಬೆ ವ್ಯಂಗ್ಯವಾಡಿದರು.
ಈ ವಿಷಯದಲ್ಲಿ ಇನ್ನೂ ಹಾಸ್ಯಮಯವಾಗಿ ಮಾತನಾಡಿದ ದುಬೆ, “ಐಪಿಸಿ ಸೆ.377 ಇನ್ನೂ ರದ್ದಾಗಿಲ್ಲ. ಆದುದರಿಂದ ರಾಹುಲ್ ಮದುವೆಯಾದಲ್ಲಿ ನಾವು ಆತನನ್ನು ತಬ್ಬಿಕೊಳ್ಳಬಹುದಾಗಿದೆ’ ಎಂದು ಹೇಳಿದರು.
“ಬಿಜೆಪಿ ಸಂಸದರನ್ನು ನಾನು ತಬ್ಬಿಕೊಳ್ಳಬಹುದೆಂದು ಅವರು (ಸಂಸದರು) ಭಾವಿಸಿದರೆ ಅವರು ಎರಡು ಹೆಜ್ಜೆ ಹಿಂದಿಡಬೇಕಾದೀತು’ ಎಂದು ರಾಹುಲ್ ಗಾಂಧಿ ಹೇಳಿದ್ದ ವ್ಯಂಗ್ಯದ ಎಚ್ಚರಿಕೆಯ ಹೇಳಿಕೆಗೆ ದುಬೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತಿದ್ದರು.