ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆರ್ಟ್ಸ್ ಕ್ಲಬ್ ಹಾಗೂ ರಾಜ್ಯಶಾಸ್ತ್ರ ವಿಭಾಗ ಶುಕ್ರವಾರ ಆಯೋಜಿಸಿದ
“ದೇಶದಲ್ಲಿ ಸಂಸದೀಯ ಮೌಲ್ಯಗಳು ಕಡಿಮೆಯಾಗುತ್ತಿದೆಯೇ’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Advertisement
ಪ್ರಸ್ತುತ ಕಾಲಘಟ್ಟದಲ್ಲಿ ಜನಸಾಮಾನ್ಯನೊಬ್ಬ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹಣ, ಪಕ್ಷ, ಅದಿಕಾರವೇ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅನೇಕ ಮಹನೀಯರಿದ್ದಾರೆ. ಜವಾಹರ್‌ಲಾಲ್ ಅವರು ತನ್ನನ್ನು ಪ್ರಶ್ನಿಸಿದವರನ್ನೇ ಸಂಪುಟಕ್ಕೆ ಸೇರಿಸಿಕೊಂಡರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಇಂದ್ರಜಿತ್ ಗುಪ್ತರಂತವರು ಸಂಸತ್‌ಗೆ ಮತ್ತಷ್ಟು ಘನತೆ ತಂದುಕೊಟ್ಟಿದ್ದಾರೆ. ಸೀತಾರಾಂ ಯೆಚೂರಿಯಂತಹ ಉತ್ತಮ ಸಂಸದೀಯ ಪಟುಗಳಿಗೆ ರಾಜ್ಯಸಭೆಗೆ ಆಯ್ಕೆಯಾಗುವ ಅದೃಷ್ಟವಿಲ್ಲ. ವ್ಯವಸ್ಥೆಯೇ ಹಾಗಿದೆ ಎಂದು ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಪಾಕಿಸ್ಥಾನ, ಚೀನಾ ಗಡಿ ತಂಟೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಸಮಯ ಜನಪ್ರತಿನಿಧಿಗಳ ಜವಾಬ್ದಾರಿಯೂ ಹೆಚ್ಚಿದೆ. ನಾವು ಆರಿಸಿ ಕಳುಹಿಸಿದ ವ್ಯಕ್ತಿ ತಪ್ಪು ಮಾಡಿದರೆ ಪ್ರಶ್ನಿಸುವ ಪರಿಪಾಠವನ್ನು ಜನರು ಬೆಳೆಸಬೇಕು. ಅಮೆರಿಕದ ಅಧ್ಯಕ್ಷರಿಗೆ ವಿಟೋ ಪವರ್ ಇದೆ. ಆದರೆ ಭಾರತದ ಅಧ್ಯಕ್ಷ ಅಥವಾ ಪ್ರಧಾನಿಗಾಗಲಿ ಆ ಅಧಿಕಾರ ಇಲ್ಲ. ಆದರೆ ನಮ್ಮಲ್ಲಿ ಜನರೇ ಸುಪ್ರೀಂ ಅವರಿಗೆ ಪ್ರಶ್ನಿಸುವ ಎಲ್ಲ ಹಕ್ಕಿದೆ ಎಂದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ, ಪ್ರೊ| ಕೆ. ಸುರೇಂದ್ರನಾಥ್ ಶೆಟ್ಟಿ ಸಮಯನ್ವಕಾರರಾಗಿ ಸಂವಾದ ನಡೆಸಿಕೊಟ್ಟರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಶಾಂತಿ ಎಸ್. ರಾವ್, ಜಸ್ಟಿನ್, ಧನುಶ್, ಆ್ಯಂಜಲೀನ್ ಡಿ’ಸೋಜಾ, ಮೈಥೆÅàಯಿ, ವಿಭಾ, ನಮ್ರಥಾ ಪ್ರಶ್ನೆಗಳನ್ನು ಕೇಳಿದರು.
ಆರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ದಿವ್ಯಾ ಶೆಟ್ಟಿ ಸ್ವಾಗತಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು. ಸಚಿನ್ ವಂದಿಸಿದರು.
Related Articles
Advertisement
ನಮಗೊಂದು, ಅವರಿಗೊಂದು ನ್ಯಾಯವೇಕೆ?ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಬೇಕಾದರೆ ಶೇ. 75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕಾಗುತ್ತದೆ. ಅದೇ ಸಂಸದರು, ಶಾಸಕರಿಗೆ ಸಂಸತ್‌ನಲ್ಲಿ ಈ ನಿಯಮ ಯಾಕಿಲ್ಲ? ರಾಜ್ಯಸಭೆಗೆ ನಾಮಾಂಕಿತರಾದ ಸಚಿನ್ ತೆಂಡೂಲ್ಕರ್, ರೇಖಾರಂತವರು ಕೇವಲ 6. 6 ರಷ್ಟು ಮಾತ್ರ ಹಾಜರಾತಿ ಇದೆ. ಅವರಿಗೂ ಮುಂದೆ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ವಿದ್ಯಾರ್ಥಿ ಶ್ರೇಯಸ್ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಹೆಗ್ಡೆ ಅವರು ಈ ವಿವೇಚನೆ ಆ ಜನಪ್ರನಿಧಿಗಳಿಗೆ ಇರಬೇಕು. ಇಂತಹ ಸಂದರ್ಭ ಸ್ಪೀಕರ್ ಅಥವಾ ಸಭಾಪತಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು. ಶೇ. 33 ರಷ್ಟು ಮಹಿಳಾ ಮೀಸಲಾತಿ ಕೇವಲ ಮಸೂದೆಗೆ ಮಾತ್ರ ಸೀಮಿತವಾಗಿದೆ. ದೇಶದಲ್ಲಿ ಕೇವಲ ಶೆ. 9ರಷ್ಟು ಮಾತ್ರ ಮಹಿಳಾ ಜನಪ್ರತಿನಿಧಿಗಳಿರುವುದು ಎಂದು ವಿದ್ಯಾರ್ಥಿ ನೇಹಾ ಪ್ರಸ್ತಾವಿಸಿದರು. ಅಪ್ರಮಾಣಿಕರಿಂದ ವರ್ಗಾವಣೆ
ಪ್ರಾಮಾಣಿಕ ಅಧಿಕಾರಿಗಳನ್ನು ಶಾಸಕರು, ಸಚಿವರು ಪ್ರಭಾವ ಬಳಸಿ ವರ್ಗಾಯಿಸುವುದು ಸಂಸದೀಯ ಮೌಲ್ಯದ ವಿರುದ್ಧವಲ್ಲವೇ ಎಂದು ವಿದ್ಯಾರ್ಥಿ ಸುಹಾನ್ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಜಯಪ್ರಕಾಶ್ ಹೆಗ್ಡೆ ಅವರು ಯಾರೂ ಅಪ್ರಮಾಣಿಕರಾಗಿರುತ್ತಾರೋ ಅಂತಹವರು ಮಾತ್ರ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾಯಿಸುತ್ತಾರೆ. ಯಾಕೆಂದರೆ ಅವರಿಗೆ ಪ್ರಾಮಾಣಿಕ ಅಧಿಕಾರಿಗಳ ಸೇವೆ ಬೇಡ. ಅಪ್ರಾಮಾಣಿಕರೇ ಬೇಕಾಗಿರುತ್ತದೆ ಎಂದರು.