Advertisement

“ನಮ್ಮ ಮಾತಿಗೀಗ ವಿಶ್ವ ಮಾನ್ಯತೆ’; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

12:55 AM Sep 09, 2020 | mahesh |

ಹೊಸದಿಲ್ಲಿ: ಜಗತ್ತಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತದ ವಸ್ತುಗಳಿಗೆ ಹೆಚ್ಚಿನ ಮಹತ್ವ ಇರುವಂತೆಯೇ ನಮ್ಮ ಮಾತುಗಳಿಗೂ ಮಹತ್ವ ಸಿಗುತ್ತಿದೆ. ಈಗ ಇಡೀ ವಿಶ್ವವೇ ನಮ್ಮತ್ತ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪತ್ರಿಕಾ ಸಮೂಹ ಸಂಸ್ಥೆಯ ಅಧ್ಯಕ್ಷ ಗುಲಾಬ್‌ ಕೊಠಾರಿ ಅವರು ಬರೆದಿರುವ ಎರಡು ಪುಸ್ತಕಗಳನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆ.

Advertisement

ದೇಶದ ಮಾಧ್ಯಮ ಸಂಸ್ಥೆಗಳು ಕೊರೊನಾ ಪರಿಸ್ಥಿತಿಯಲ್ಲಿ ಜನರ ಅಗತ್ಯ-ಕಷ್ಟಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿವೆ ಎಂದು ಶ್ಲಾ ಸಿದ್ದಾರೆ. ನಮ್ಮ ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಜಾಗತಿಕ ಮಾನ್ಯತೆ ಅಗತ್ಯ. ಡಿಜಿಟಲ್‌ ಯುಗದಲ್ಲಿ ಜಗತ್ತಿನ ಮೂಲೆಗಳಿಗೆ ನಾವು ತಲುಪಬೇಕಾಗಿದೆ. ಜಗತ್ತಿನ ಇತರ ಭಾಗಗಳಲ್ಲಿ ಇರುವಂತೆ ಭಾರತೀಯ ಸಂಸ್ಥೆಗಳೂ ಪ್ರಶಸ್ತಿ ಕೊಡುವಂತೆ ಆಗಬೇಕು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಭಾವ ವೃದ್ಧಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳ ಬಗ್ಗೆ ಟೀಕೆಗಳೂ ವ್ಯಕ್ತವಾಗುತ್ತಿವೆ. ಪ್ರತಿಯೊಬ್ಬರೂ ಟೀಕೆಗಳಿಂದ ಕಲಿಯಬೇಕಾದ ಅಂಶವಿದೆ. ಇದರಿಂದಾಗಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ ಎಂದಿದ್ದಾರೆ ಮೋದಿ.

ಕೊಠಾರಿಯವರು ಬರೆದ ಸಂವಾದ ಉಪನಿಷತ್‌ ಮತ್ತು ಅಕ್ಷರ ಯಾತ್ರಾ ಎಂಬ ಪುಸ್ತಕಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನರೇಂದ್ರ ಮೋದಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇದೊಂದು ಶ್ಲಾಘನೀಯ ಪ್ರಯತ್ನ. ಗೂಗಲ್‌ ಗುರುವನ್ನೇ ಸರ್ವಶ್ರೇಷ್ಠವೆಂದು ನಂಬಿರುವ ಹಾಲಿ ದಿನಮಾನಗಳ ಯುವಕರು ಈ ಪುಸ್ತಕಗಳನ್ನು ಓದಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next