Advertisement

Karnataka: ಮಲೇಷ್ಯಾಕ್ಕೂ ಮಾದರಿ ನಮ್ಮ ಪಡಿತರ ವಿತರಣೆ

11:07 PM Sep 20, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಪಡಿತರ ವಿತರಣ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಕರ್ನಾಟಕಕ್ಕೆ ಆಗಮಿಸಿರುವ ಮಲೇಷ್ಯಾ ಸರಕಾರದ ನಿಯೋಗವು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತು.

Advertisement

ಕುಮಾರಕೃಪಾ ಅತಿಥಿಗೃಹದಲ್ಲಿ ಸಚಿವರನ್ನು ಭೇಟಿ ಮಾಡಿದ ಮಲೇಷ್ಯಾ ಉಪ ಸಚಿವ ವೈ.ಬಿ. ಸನತೇರ್‌ ಪುವನ್‌ ಹಜಾಯ್‌ ಪುಜಿಯಾ ಬಿನಿಟಿ ಸಲೇಹ್‌ ನೇತೃತ್ವದ ನಿಯೋಗವು ಕರ್ನಾಟದಲ್ಲಿನ ಪಡಿತರ ವಿತರಣೆ ಪದ್ಧತಿಯನ್ನು ಮಲೇಷ್ಯಾದಲ್ಲೂ ಅಳವಡಿಸಿಕೊಳ್ಳಲು ಉತ್ಸುಕತೆ ತೋರಿದೆ.

ಆಹಾರ ಪದಾರ್ಥಗಳನ್ನು ಎಲ್ಲಿಂದ ಹೇಗೆ ಖರೀದಿಸುತ್ತೀರಿ? ಅವುಗಳನ್ನು ದಾಸ್ತಾನು ಎಲ್ಲಿ ಮಾಡುತ್ತೀರಿ? ಯಾವ ಮಾದರಿಯ ಪಡಿತರ ಚೀಟಿ ಕೊಡಲಾಗಿದೆ? ಎಂಬಿತ್ಯಾದಿ ಅಂಶಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಎರಡು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿರುವ ಮಲೇಷ್ಯಾ ನಿಯೋಗ, ಆಹಾರ ಧಾನ್ಯಗಳನ್ನು ದಾಸ್ತಾನು ಮಾಡುವ ಗೋದಾಮುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.

ಮಲೇಷ್ಯಾಕ್ಕೂ ಮಾದರಿ ನಮ್ಮ ಪಡಿತರ ವಿತರಣೆಈ ವೇಳೆ ಆಹಾರ ಇಲಾಖೆ ಕಾರ್ಯದರ್ಶಿ ಜಿ.ಸಿ. ಪ್ರಕಾಶ್‌, ಆಯುಕ್ತೆ ಕನಗವಲ್ಲಿ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next