Advertisement

Congress ನಮ್ಮ ಪಕ್ಷದವರು ಯಾವುದೇ ಆಪರೇಷನ್ ಮಾಡುತ್ತಿಲ್ಲ: ಕಾಗೋಡು ತಿಮ್ಮಪ್ಪ

08:07 PM Aug 22, 2023 | Team Udayavani |

ದಾವಣಗೆರೆ: ಆಪರೇಷನ್ ಹಸ್ತ… ಏನೂ ಇಲ್ಲ. ಪಕ್ಷದಲ್ಲಿ ಅಸಮಾಧಾನ ಇದ್ದಾಗ ಕೆಲವರು ಪಕ್ಷಾಂತರ ಮಾಡುತ್ತಾರೆ. ಕೆಲವರು ಅವರಾಗಿಯೇ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ನಮ್ಮ ಪಕ್ಷದವರು ಯಾವುದೇ ಆಪರೇಷನ್ ಮಾಡುತ್ತಿಲ್ಲ ಎಂದು ವಿಧಾನ ಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ ಬಂಗಾರಪ್ಪ ಕಾಂಗ್ರೆಸ್‌ಗೆ ಬರುವ ಬಗ್ಗೆ ಗೊತ್ತಿಲ್ಲ. ಆಯನೂರು ಮಂಜುನಾಥ್ ನನ್ನ ಬಳಿ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ಆರು ತಿಂಗಳಲ್ಲಿ ಸರ್ಕಾರ ಪತನ ಎಂದು ಯತ್ನಾಳ್ ಹೇಳಿದ್ದಾರೆ. ಸರ್ಕಾರ ಪತನ ಆಗುವುದಿಲ್ಲ. ಅದೆಲ್ಲ ಸುಳ್ಳು ಮತ್ತು ಭ್ರಮೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ಅಽಕಾರ ಬಂದಿದೆ. ಹೊಸ ಕಾರ್ಯಕ್ರಮ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.ಜನರ ಸಮಸ್ಯೆಗಳನ್ನ ಬಗೆ ಹರಿಸಬೇಕಾದ ಅಗತ್ಯತೆ ಇದೆ. ಸಿದ್ದರಾಮಯ್ಯ ಆ ಕೆಲಸವನ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಹರಿಪ್ರಸಾದ್ ಒಳ್ಳೆಯ ಲೀಡರ್. ಸಹಕಾರ ಇದ್ದೆ ಇದೆ. ಅವರು ತಳಸಮುದಾಯದ ಸಮಾವೇಶ ಮಾಡುತ್ತಿರುವುದು ಗೊತ್ತಿಲ್ಲ. ಅನೇಕ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಇರುತ್ತೆ, ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದರು.

Advertisement

ಮುಖ್ಯಮಂತ್ರಿಗಳ ಬಗ್ಗೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ. ಒಬ್ಬರಿಗೆ ಆಸ್ತಿ ಹಂಚಿ ಕೊಡೊಕೆ ಆಗಲ್ಲ.ಕೆಲವರಿಗೆ ಅವಕಾಶ ಸಿಗುತ್ತೆ, ಮುಂದೆ ಬೇರೆಯವರಿಗೆ ಮತ್ತೊಂದು ಅವಕಾಶ ಇರುತ್ತೆ.ಎಲ್ಲವನ್ನು ವರಿಷ್ಠರ ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಾನು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next