Advertisement

ವಿಕ್ರಮ್ ಅವಶೇಷ ನಾವೇ ಮೊದಲು ಪತ್ತೆ ಹಚ್ಚಿದ್ದೇವೆ; ನಾಸಾ ಘೋಷಣೆಗೆ ಇಸ್ರೋ ತಿರುಗೇಟು

09:45 AM Dec 05, 2019 | Team Udayavani |

ಬೆಂಗಳೂರು/ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಚಂದ್ರಯಾನ-2 ಯೋಜನೆಯಡಿ ಚಂದ್ರನ ಮೇಲೆ ಇಳಿಯುವಾಗ ನಾಪತ್ತೆಯಾಗಿದ್ದ ವಿಕ್ರಮ್ ಲ್ಯಾಂಡರ್ ಬಿದ್ದ ಅವಶೇಷಗಳ ಸ್ಥಳವನ್ನು ಪತ್ತೆಹಚ್ಚಿರುವುದಾಗಿ ಹೇಳಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಘೋಷಣೆಯನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ನಿರಾಕರಿಸಿದ್ದಾರೆ. ನಾಸಾ ಪತ್ತೆ ಹಚ್ಚುವ ಮುನ್ನವೇ ಇಸ್ರೋ ತುಂಬಾ ಹಿಂದೆಯೇ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ.

Advertisement

ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಮ್ಮ ಆರ್ಬಿಟರ್ ಪತ್ತೆ ಹಚ್ಚಿತ್ತು. ಈ ಬಗ್ಗೆ ನಮ್ಮ ವೆಬ್ ಸೈಟ್ ನಲ್ಲಿ ಈಗಾಗಲೇ ಘೋಷಿಸಿದ್ದೇವೆ. ನೀವು ಇಸ್ರೋ ವೆಬ್ ಸೈಟ್ ಗೆ ಹೋಗಿ ನೋಡಬಹುದು ಎಂದು ಶಿವನ್ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ರೋ ವೆಬ್ ಸೈಟ್ ನಲ್ಲಿ 2019ರ ಸೆಪ್ಟಂಬರ್ 10ರಂದು ನೀಡಿರುವ ಪ್ರಕಟಣೆಯಲ್ಲಿ, ಚಂದ್ರಯಾನ 2ರ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಹಚ್ಚಿದೆ. ಆದರೆ ಈವರೆಗೂ ಸಂಪರ್ಕ ಸಾಧ್ಯವಾಗಿಲ್ಲ. ಲ್ಯಾಂಡರ್ ಜತೆಗೆ ಸಂಪರ್ಕ ಸಾಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿತ್ತು.

ವಿಕ್ರಮ್ ಲ್ಯಾಂಡರ್ ನ ಅವಶೇಷಗಳನ್ನು ಚೆನ್ನೈ ಮೂಲದ ಷಣ್ಮುಗ ಸುಬ್ರಹ್ಮಣ್ಯಂ ಎಂಬವರು ಪತ್ತೆ ಹಚ್ಚಿದ್ದು, ಇವರು ನೀಡಿದ ಮಹತ್ವದ ಮಾಹಿತಿ ಆಧಾರದ ಮೇರೆಗೆ ವಿಕ್ರಮ್ ಲ್ಯಾಂಡರ್ ಹುಡುಕಾಟದಲ್ಲಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ) ಸಂಸ್ಥೆ ವಿಕ್ರಮ್ ಪತನವಾಗಿರುವ ಸ್ಥಳವನ್ನು ಪತ್ತೆಹಚ್ಚಿರುವುದಾಗಿ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next