ಜಮ್ಮು-ಕಾಶ್ಮೀರ: ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಜಮ್ಮು-ಕಾಶ್ಮೀರದ ಎಲ್ಲಾ ಪ್ರದೇಶಗಳನ್ನು ನಾವು ವಾಪಸ್ ಪಡೆದ ನಂತರವೇ ನಮ್ಮ ಸಂಕಲ್ಪ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ದೆಹಲಿಗೆ ಬಿಜೆಪಿ ಬೆಟ್ಟದಷ್ಟು ಕಸದ ರಾಶಿ ಬಿಟ್ಟು ಬೇರೆ ಏನೂ ಕೊಡುಗೆ ಕೊಟ್ಟಿಲ್ಲ: ಕೇಜ್ರಿವಾಲ್
ಸಿಂಗ್ ಅವರು ಗುರುವಾರ (ಅಕ್ಟೋಬರ್ 27) ಬಡ್ಗಾಮ್ ನಲ್ಲಿ ಭಾರತೀಯ ಸೇನೆಯ 76ನೇ ಪದಾತಿ ದಳ ಆಯೋಜಿಸಿದ್ದ “ಶೌರ್ಯ ದಿನದ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಜಮ್ಮು-ಕಾಶ್ಮೀರ(ಪಿಒಕೆ) ಪೂರ್ಣ ಭಾಗ ಸೇರಿದಂತೆ ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರದೇಶವನ್ನು ಮರಳಿ ಪಡೆದ ನಂತರವಷ್ಟೇ ನಮ್ಮ ಸಂಕಲ್ಪಕ್ಕೆ ಅರ್ಥ ಬರಲಿದೆ ಎಂದರು.
ಭಾರತ, ಪಾಕಿಸ್ತಾನ ಇಬ್ಭಾಗವಾದ ನಂತರ ಪಾಕಿಸ್ತಾನ ತನ್ನ ನಿಜ ಬಣ್ಣವನ್ನು ಪ್ರದರ್ಶಿಸಿದೆ. ನಮಗೆ ಜಮ್ಮು-ಕಾಶ್ಮೀರದ ಮೇಲಿನ ದಾಳಿ ಹಾಗೂ ನುಸುಳುಕೋರರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಡವಳಿಕೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನಾವೀಗ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಲ್ಲಿ ಅಭಿವೃದ್ಧಿಯನ್ನು ಆರಂಭಿಸಿದ್ದೇವೆ. ನಾವು ಯಾವಾಗ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು ಮರಳಿ ಪಡೆದಾಗಲೇ ನಮ್ಮ ಗುರಿ ಸಾಧಿಸಿದಂತಾಗಲಿದೆ ಎಂದು ಸಿಂಗ್ ಹೇಳಿದರು.