Advertisement

Karnataka Govt; ನಮ್ಮ ಸರ್ಕಾರ ಭದ್ರವಾಗಿದೆ: ಸಚಿವ ಡಿ.ಸುಧಾಕರ್

12:36 PM Aug 14, 2023 | Team Udayavani |

ಚಿತ್ರದುರ್ಗ: ಅಧಿಕಾರ ಇಲ್ಲದೆ ಭ್ರಮನಿರಸನಗೊಂಡು, ಬಿಜೆಪಿಯ ಬಾಡಿಗೆ ಗುತ್ತಿಗೆದಾರರಿಂದ ನಮ್ಮ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 40% ತಿಂದು ತಿಂದು ಈಗ ಅಧಿಕಾರ ಇಲ್ಲದೆ ಒದ್ದಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿಕೆಗೆ ತಿರುಗೇಟು‌ ನೀಡಿದರು.

ಇದನ್ನೂ ಓದಿ:Box Office:‌ ಸಾಲು ಸಾಲು ಸಿನಿಮಾದಿಂದ ಭರ್ತಿಯಾದ ಥಿಯೇಟರ್‌; 4 ದಿನದಲ್ಲಿ 400 ಕೋಟಿ ಗಳಿಕೆ

ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗಲಿದೆ ಎನ್ನುವ ಬಿಜೆಪಿ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಭದ್ರವಾಗಿದೆ. ಈ ಬಾರಿ ಆಪರೇಷನ್ ಆಗುವಂತಹ ಶಾಸಕರಿಲ್ಲ. ಕಳೆದ ಸರ್ಕಾರದಲ್ಲಿ ಆಪರೇಷನ್ ಆದ ಶಾಸಕರಿಗೆ ಜನ ಪಾಠ ಕಲಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next