Advertisement

26 ವರ್ಷದ ಕ್ರಿಕೆಟಿಗರ ಪಡೆಗಿಂತ ಧೋನಿ ಶ್ರೇಷ್ಠ: ರವಿಶಾಸ್ತ್ರೀ

07:35 AM Dec 26, 2017 | Team Udayavani |

ಹೊಸದಿಲ್ಲಿ: 26 ವರ್ಷದ ಕ್ರಿಕೆಟಿಗರ ಪಡೆಗಿಂತ 36ರ ಹರೆಯದ ಧೋನಿಯೇ ಬಲಿಷ್ಠ,. ಸದ್ಯದ ಮಟ್ಟಿಗೆ ಭಾರತೀಯ ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಕ್ರಿಕೆಟಿಗ ಲಭ್ಯವಿಲ್ಲ ಎಂದು ರಾಷ್ಟ್ರೀಯ ಕೋಚ್‌ ರವಿಶಾಸ್ತ್ರೀ ಹೇಳಿದ್ದಾರೆ. ಮಾಜಿ ನಾಯಕನಲ್ಲಿ ಏನಾದರೂ ತಪ್ಪು ಗಳನ್ನು ಹುಡುಕುವ ಮೊದಲು ಟೀಕಾಕಾರರು ತಮ್ಮ 36ರ ಹರೆಯದಲ್ಲಿ ಹೇಗಿರಬಹುದೆಂದು ಅಲೋಚಿಸುವುದು ಒಳ್ಳೆಯದು ಎಂದು ಶಾಸ್ತ್ರೀ ಹೇಳುವ ಮೂಲಕ ಧೋನಿ ಅವರ ಸಾಮರ್ಥ್ಯವನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

ಶ್ರೀಲಂಕಾ ವಿರುದ್ಧ ನಡೆದ ಏಕದಿನ ಮತ್ತು ಟ್ವೆಂಟಿ20 ಸರಣಿಯಲ್ಲಿ ವಿಕೆಟ್‌ಕೀಪರ್‌ ತಥಾ ಬ್ಯಾಟ್ಸ್‌ಮನ್‌ ಧೋನಿ ಅವರ ಆಲ್‌ರೌಂಡ್‌ ನಿರ್ವಹಣೆಯು ಟೀಕಾಕಾರರ ಬಾಯಿ ಮುಚ್ಚಿ ಸಲು ಯಶಸ್ವಿಯಾಗಿದೆ. ವಿಕೆಟ್‌ ಹಿಂದುಗಡೆ ಧೋನಿ ಅವರ ಅದ್ಭುತ ನಿರ್ವಹಣೆಯನ್ನು ಗಮನಿಸಿಯೇ ರಾಷ್ಟ್ರೀಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ ಕೂಡ 2019ರ ವಿಶ್ವಕಪ್‌ತನಕ ಧೋನಿ ಅವರು ವಿಕೆಟ್‌ಕೀಪರ್‌ ಆಗಿ ಮುಂದುವರಿಯಲಿದ್ದಾರೆಂದು ಹೇಳಿದ್ದಾರೆ.

ನಾವು ಮೂರ್ಖರಲ್ಲ. ಕ್ರಿಕೆಟನ್ನು ಕಳೆದ 20-40 ವರ್ಷಗಳಿಂದ ವೀಕ್ಷಿಸುತ್ತ ಬಂದಿದ್ದೇನೆ. ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಕಳೆದೊಂದು ದಶಕದಿಂದ ಆಡುತ್ತಿದ್ದಾರೆ. ನಮಗೆ ತಿಳಿದಿದೆ, ಈ ಪ್ರಾಯದಲ್ಲಿ ಕೆಲವು ಆಟಗಾರರು ತಾವು ಕ್ರಿಕೆಟ್‌ ಆಡಿರುವುದನ್ನು ಮರೆತಿರಬಹುದು. ಆದರೆ ಧೋನಿ ಹಾಗಲ್ಲ. ಅವರು ಈಗ ಕೂಡ 26ರ ಹರೆಯದ ಕ್ರಿಕೆಟಿಗರನ್ನು ಕೂಡ ಸೋಲಿಸುವಷ್ಟು ಸಮರ್ಥರಿದ್ದಾರೆ ಎಂದು ಶಾಸಿŒ  ನುಡಿದರು. 

ಕನ್ನಡಿಯಲ್ಲಿ ನೋಡಿಕೊಂಡು 36ರ ಹರೆಯದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಿ. ವೇಗವಾಗಿ ಎರಡು ರನ್‌ ಗಳಿಸಲು ಸಾಧ್ಯವಿದೆಯಾ. ಆದರೆ ನೀವು ಎರಡು ರನ್‌ ಪೂರ್ತಿಗೊಳಿಸುವಷ್ಟರಲ್ಲಿ ಧೋನಿ ಮೂರು ರನ್‌ ಓಡಿರಬಹುದು. ಅಂತಹ ದೈಹಿಕ ಕ್ಷಮತೆಯನ್ನು ಧೋನಿ ಹೊಂದಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ಅವರನ್ನು ಇವತ್ತಿನ ತನಕ ಏಕದಿನ ತಂಡದಿಂದ ಬದಲಿಸಲು ಬೇಕಾದ ಸಮರ್ಥ ವಿಕೆಟ್‌ ಕೀಪರ್‌ ಭಾರತಕ್ಕೆ ಲಭಿಸಿಲ್ಲ ಎಂದು ಶಾಸ್ತ್ರೀ ವಿವರಿಸಿದರು.

37ನೇ ಗೆಲುವು
ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯನ್ನು ಕ್ಲೀನ್‌ಸಿÌàಪ್‌ಗೆçಯುವ ಮೂಲಕ ಭಾರತೀಯ ಈ ವರ್ಷ ಆಡಿದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 37ನೇ ಗೆಲುವು ದಾಖಲಿಸಿದೆ. ಇದೊಂದು ತಂಡ ಪ್ರಯತ್ನವಾಗಿದೆ. ವೈಯಕ್ತಿಕ ಸಾಧನೆಯಲ್ಲ. ತಂಡದ ಎಲ್ಲ ಆಟಗಾರರ ಪ್ರಯತ್ನದಿಂದಾಗಿ ಭಾರತ ಈ ಸಾಧನೆ ಮಾಡುವಂತಾಗಿದೆ. “ಐ’ ಎಂಬ ಪದವನ್ನು ಹೊರಗೆ ಬಿಸಾಡಬೇಕಾಗಿದೆ. ನಮ್ಮದು ಯಾವಾಗಲೂ “ವಿ’. ತಂಡ ಸಂಸ್ಕೃತಿಯನ್ನು ಪಾಲಿಸದಿದ್ದರೆ ಅಂತಹ ವ್ಯಕ್ತಿಗಳು ಮನೆಗೆ ತೆರಳಬಹುದು. ಅವರು ಎಂತಹ ದೊಡ್ಡ ವ್ಯಕ್ತಿಗಳೇ ಇರಬಹುದು. ಇದುವೇ ನಮ್ಮ ಈ ತಂಡದ ಯಶಸ್ಸಿನ ಗುಟ್ಟು ಎಂದು ರವಿಶಾಸ್ತ್ರೀ ತಿಳಿಸಿದರು.

Advertisement

ಟೆಸ್ಟ್‌  ಸರಣಿ ಜಯ ತಂಡದ ಗುರಿ
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮೊದಲ ಬಾರಿ ಟೆಸ್ಟ್‌ ಸರಣಿ ಗೆಲ್ಲುವ ಗುರಿಯನ್ನು ಭಾರತ ಇಟ್ಟುಕೊಂಡಿದೆ. ಜ. 5ರಿಂದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಇದಕ್ಕಾಗಿ ಭಾರತೀಯ ತಂಡ ಡಿ. 27ರಂದು ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ.

ನಮಗೆ ಎಲ್ಲ ಎದುರಾಳಿಗಳು ಒಂದೇ. ಎದುರಾಳಿ ತಂಡವನ್ನು ಗೌರವಿಸಬೇಕಾಗಿದೆ ಮತ್ತು ಪ್ರತಿ ಯೊಂದು ಪಂದ್ಯವನ್ನೂ ತವರಿನ ಪಂದ್ಯದಂತೆ ಪರಿಗಣಿಸಲಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಟೆಸ್ಟ್‌ ಸರಣಿ ಜಯಿಸಿಲ್ಲ. ಆದರೆ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದೇವೆ ಎಂದು ರವಿಶಾಸ್ತ್ರೀ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next