Advertisement

ಎಲ್ಲರಿಗೂ ಲಸಿಕೆ ನೀಡುವುದು ನಮ್ಮಉದ್ದೇಶ: ಕೆ.ಸುಧಾಕರ್‌

04:32 PM May 31, 2021 | Team Udayavani |

ಬೆಂಗಳೂರು: ಎಲ್ಲರಿಗೂ ಆದಷ್ಟುಶೀಘ್ರ ಕೋವಿಡ್‌ ಲಸಿಕೆ ನೀಡುವುದುನಮ್ಮ ಮುಂದಿರುವ ಸದ್ಯದ ಉದ್ದೇಶ.ಇದರಿಂದಾಗಿ ಕೊರೊನಾದ ಮುಂದಿನ ಅಲೆ ತಡೆಯಬಹುದು. ಅಲ್ಲಿಯವರೆಗೆಎಲ್ಲರೂ ಕೋವಿಡ್‌ ಸುರಕ್ಷತಾ ಕ್ರಮಕಡೆಗಣಿಸಬಾರದು ಎಂದು ಆರೋಗ್ಯಮತ್ತು ವೈದ್ಯಕೀಯ ಶಿಕ್ಷಣ ಸಚಿವಡಾ.ಕೆ.ಸುಧಾಕರ್‌ ಮನವಿ ಮಾಡಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ,ಕೋವಿಡ್‌ ಲಸಿಕೆ ಪಡೆಯದೇ ಇದ್ದಲ್ಲಿ ಈ ರೀತಿಮೂರು, ನಾಲ್ಕನೇ ಅಲೆಬರುವ ಸಾಧ್ಯತೆ ಇರುತ್ತದೆ. ಆದಷ್ಟುಶೀಘ್ರ ಎಲ್ಲರಿಗೂ ಲಸಿಕೆ ನೀಡುವುದುನಮ್ಮ ಉದ್ದೇಶ. ಮಕ್ಕಳಿಗೂ ಲಸಿಕೆನೀಡಲು ಪ್ರಯೋಗ ನಡೆಯುತ್ತಿದೆ.ವೃದ್ಧರು, ಯುವಜನರು, ಹೆಚ್ಚು ಜನರಸಂಪರ್ಕ ಕ್ಕೊಳಗಾದವರಿಗೆ ಲಸಿಕೆ ನೀಡಲಾಗು ತ್ತಿದೆ. ಎರಡು ಡೋಸ್‌ ಪಡೆದವರು ಇಡೀ ಪ್ರಕ್ರಿಯೆ ಮುಗಿಯುವವರೆಗೆ ಕೋವಿಡ್‌ ಸುರಕ್ಷತಾ ಕ್ರಮಪಾಲಿಸಬೇಕು ಎಂದು ಕೋರಿದರು.

ರಾಜ್ಯಗಳ ಬೇಡಿಕೆಗನುಗುಣವಾಗಿರೆಮ್‌ಡೆಸಿವಿಯರ್‌ ಔಷಧಿಯನ್ನುಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿತ್ತು.ಈಗ ಕೆಲ ಕಂಪನಿಗಳು ಮುಂದೆ ಬಂದುರಾಜ್ಯಕ್ಕೆ ಔಷಧಿ ನೀಡುವುದಾಗಿ ತಿಳಿಸಿವೆ.ಮಾರುಕಟ್ಟೆಯಲ್ಲಿ ಔಷಧಿ ಲಭ್ಯವಿರುವುದರಿಂದಲೇ ಕೇಂದ್ರ ಸರ್ಕಾರ ನೇರವಾಗಿಖರೀದಿಸಲು ರಾಜ್ಯಕ್ಕೆ ಸೂಚನೆ ನೀಡಿದೆ ಎಂದರು.

ಬ್ಲ್ಯಾಕ್‌ ಫಂಗಸ್‌ಔಷಧಿಗೆ ಕೇಂದ್ರ ಸಚಿವಡಿ.ವಿ.ಸದಾನಂದಗೌಡರುಎಂಟಕ್ಕೂ ಅಧಿಕ ಕಂಪನಿಗಳೊಂದಿಗೆ ಮಾತುಕತೆನಡೆಸಿದ್ದಾರೆ. ಸುಮಾರು 80ಸಾವಿರ ವೈಲ್‌ ಮಾರು ಕಟ್ಟೆಯಲ್ಲಿದೆ. ರಾಜ್ಯಕ್ಕೆ ಈವರೆಗೆ 8-10 ಸಾವಿರ ವೈಲ್‌ದೊರೆತಿದೆ. ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ1,250 ಪ್ರಕರಣ ಕಂಡು ಬಂದಿದೆ.30-35 ಸಾವಾಗಿದೆ ಎನ್ನ ಲಾ ಗಿದ್ದರೂಸರಿಯಾದ ಡೆತ್‌ ಆಡಿಟ್‌ ಮಾಡಲುಸೂಚಿಸಲಾ ಗಿದೆ. ಸರ್ಕಾರಿ ಆಸ್ಪತ್ರೆ,ಖಾಸಗಿ ಆಸ್ಪತ್ರೆಗೆ ದಾಖ ಲಾದ ಕಪ್ಪುಶಿಲೀಂಧ್ರ ಸೋಂಕಿ ತರಿಗೆ ಔಷಧಿವಿತರಿಸಲಾಗುತ್ತಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next