Advertisement

ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ

06:43 AM Mar 29, 2019 | Vishnu Das |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಕಾಂಗ್ರೆಸ್‌
-ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗಾಗಿ ನನ್ನೆಲ್ಲಾ ಶಕ್ತಿಯನ್ನು ಧಾರೆ ಎರೆಯಲಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ -ಜೆಡಿಎಸ್‌ ಜಂಟಿ ಸಭೆಯಲ್ಲಿ ಪಾಲ್ಗೊಂಡು
ಅವರು ಮಾತನಾಡಿದರು. ಮಾಧ್ಯಮಗಳು ಏನೇ ವಿಶ್ಲೇಷಣೆ ಮಾಡಲಿ. ಈಗಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ. ಐದು
ವರ್ಷದ ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಹಲವು ಘಟನೆಗಳು ನಡೆದಿವೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು. ನಮ್ಮ ಮೈತ್ರಿಯಲ್ಲಿ ಸ್ವಾರ್ಥವಿಲ್ಲ ಎಂದರು.

37 ಶಾಸಕರಿದ್ದ ಜೆಡಿಎಸ್‌ಗೆ ಸೋನಿಯಾ- ರಾಹುಲ್‌ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು
ಕೊಟ್ಟಿದ್ದಾರೆ. ಮಹಾಘಟಬಂಧನ್‌ನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸ್ಥಳೀಯವಾಗಿ ಇರಬಹುದು. ಆದರೆ, ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವೆ ಯಾವುದೇ ಗೊಂದಲ ಇಲ್ಲ. 25 ಸ್ಥಾನಗಳನ್ನು ಗೆಲ್ಲುವ ಅವಕಾಶ ನಮಗಿದೆ. ಈ ಬಾರಿಯ ಚುನಾವಣೆಯಲ್ಲಿ ನಾವೆಲ್ಲರೂ ಹೋರಾಡಿ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲನ್ನು ಮುಚ್ಚಿಸುತ್ತೇವೆ.
ಬಿಜೆಪಿ ಆಧಿಕಾರಕ್ಕೆ ಬಂದರೆ ದೊಡ್ಡ ಗಂಡಾಂತರ ಕಾದಿದೆ. ನನ್ನ ಐವತ್ತು ವರ್ಷದ ರಾಜಕೀಯ ಜೀವನದ ಅನುಭವದ ಆಧಾರದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೆನೆ ಎಂದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಬೆಂಗಳೂರು ಉತ್ತರ
ಕ್ಷೇತ್ರದ ಕಾಂಗ್ರೆಸ್‌ -ಜೆಡಿಎಸ್‌ ನಾಯಕರ ಜಂಟಿ ಸಭೆಯಲ್ಲಿ ಮೈತ್ರಿ ಪಕ್ಷದ ನಾಯಕರ ಜೊತೆ ಒಗ್ಗಟ್ಟಿನ ಸಂಕೇತ ಪ್ರದರ್ಶಿಸಿದ ಜೆಡಿಎಸ್‌ ವರಿಷ್ಠ ದೇವೇಗೌಡ.

ಜನರಿಗೆ ಟೋಪಿ ಹಾಕಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,
ಬಿಜೆಪಿಯ ನೋಟು ಅಮಾನ್ಯ ತೀರ್ಮಾನದಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ. “ಅಚ್ಚೆ ದಿನ್‌’ ನರೇಂದ್ರ ಮೋದಿ ಹಾಗೂ ಅಮಿತ್‌ ಶಾಗೆ ಮಾತ್ರ ಬಂದಿದೆ ಎಂದರು. ಬಿಜೆಪಿಯವರು ನೋಡಲು ಚೆನ್ನಾಗಿ ಕಾಣುತ್ತಾರೆ.

Advertisement

ಬಣ್ಣ, ಬಣ್ಣದ ಜನ ಅಲ್ಲೇ ಇದ್ದಾರೆ. ಆದರೆ, ಅವರಂತಹ ಕೊಳಕು ಜನ ದೇಶದಲ್ಲಿ ಎಲ್ಲೂ ಇಲ್ಲ. ಎರಡುಕೋಟಿ ಉದ್ಯೋಗ ಸೃಷ್ಟಿ, 15 ಲಕ್ಷ ರೂ.ಪ್ರತಿಯೊಬ್ಬರ ಬ್ಯಾಂಕ್‌
ಖಾತೆಗೆ ಹಾಕುವುದಾಗಿ ಹೇಳಿ ಜನರಿಗೆ ಟೋಪಿ ಹಾಕಿದರು ಎಂದು ಲೇವಡಿ ಮಾಡಿದರು.
“ದೇವೇಗೌಡರು ಹತ್ತು ತಿಂಗಳು ಪ್ರಧಾನಿಯಾಗಿ ಜನಪರ ಕೆಲಸ ಮಾಡಿದರು. ನಾನು ಮುಖ್ಯಮಂತ್ರಿಯಾಗಿ ನುಡಿದಂತೆ ನಡೆದಿದ್ದೇನೆ. ಹತ್ತು ತಿಂಗಳಿನಿಂದ ಕುಮಾರಸ್ವಾಮಿ ನಮ್ಮ ಕಾರ್ಯಕ್ರಮ ಮುಂದುವರಿಸಿದ್ದಾರೆ. ಆದರೆ, ಯಡಿಯೂರಪ್ಪನವರು ಒಂದೇ ಒಂದು ರೂ.ರೈತರ ಸಾಲ ಮನ್ನಾ ಮಾಡಲಿಲ್ಲ. ಅವನ ಮನೆ ಹಾಳಾಗ. ಸಾಲಮನ್ನಾ ಮಾಡಿ ಎಂದರೆ ನೋಟು ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ ಎಂದಿದ್ದರು. ಇವರು ರೈತ ನಾಯಕರಾ ಎಂದು ಪ್ರಶ್ನಿಸಿದರು. ದೇವೇಗೌಡರ, ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇದ್ದಿದ್ದೆ. ವೈಯಕ್ತಿಕ ಜಗಳ ಇಲ್ಲ. ಬಿಜೆಪಿ ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next