Advertisement

ನಮ್ಮ ಹೋರಾಟ ರೈತರ ಪರ: ಶ್ರೀನಿವಾಸ ನಿಡಿಂಜಿ

05:13 PM Dec 27, 2017 | |

ಬೆಳ್ಳಾರೆ: ನಮ್ಮ ಹೋರಾಟ ರೈತರ ಪರವಾಗಿ ಇರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ನಿಡಿಂಜಿ ಹೇಳಿದರು. ಅವರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ರೈತ ಘಟಕದ ಆಶ್ರಯದಲ್ಲಿ ಅರಂತೋಡು ಗ್ರಾಮ ಮತ್ತು ತೊಡಿಕಾನ ಗ್ರಾಮ ರೈತ ಘಟಕ ರಚನೆ ಕುರಿತು ಅರಂತೋಡು ತೆಕ್ಕಿಲ್‌ ಸಮುದಾಯ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

Advertisement

ನಾವೆಲ್ಲರೂ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು. ರೈತ ಧ್ವಜದಡಿ ಬಂದಾಗ ನಮ್ಮ ಹೋರಾಟ ರೈತ ಪರ
ಚಿಂತನೆ ಹೊಂದಿರಬೇಕು. ನಮ್ಮ ಭಾಗದಲ್ಲಿ ಅಡಿಕೆಗೆ ಹಳದಿ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೂಲಿ ಕಾರ್ಮಿಕರ ದಿನ ಗೂಲಿ ಜಾಸ್ತಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ರೈತ ಪರ ಹೋರಾಟದಲ್ಲಿ ರೈತ ಮಹಿಳೆಯರು ಮುಂದೆ ಬರಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ, ರೈತ ಹೊನ್ನಪ್ಪ ಮಾಸ್ತರ್‌ ಅಡ್ತಲೆ ಮಾತನಾಡಿ, ಅಡಿಕೆಯ ಹಳದಿ ರೋಗಕ್ಕೆ ಔಷಧಿ
ಸಂಶೋಧಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಕೇಳಿದರೆ ಸಿಬಂದಿ ಕೊರತೆ ಎನ್ನುತ್ತಾರೆ. ಸರಕಾರ ಕೋವಿ ಪರವಾನಿಗೆ ನವೀಕರಣಕ್ಕೆ 1,500 ರೂ. ಶುಲ್ಕ ವಿಧಿಸಿ ರೈತರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ದೂರಿದರು.

ನೂತನ ಅಧ್ಯಕ್ಷ ಪರ್ನೋಜಿ ತೀರ್ಥ ರಾಮ ಮಾತನಾಡಿದರು. ಭತ್ತದ ಬೇಸಾಯಗಾರರಾದ ದೇರಾಜೆ ಹೂವಯ್ಯ ಗೌಡ ಹಾಗೂ ಅಬ್ದುಲ್‌ ಲತೀಫ್ ಮೊಟ್ಟೆಂಗಾರು ಅವರನ್ನು ಸಮ್ಮಾನಿಸಲಾಯಿತು. ರೈತರಿಗೆ ಹಸಿರು ಶಾಲು ನೀಡಿ, ಪ್ರಮಾಣವಚನ ಬೋಧಿಸಲಾಯಿತು. ಅಗಲಿದ ರೈತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. 

ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಉಪಾಧ್ಯಕ್ಷ ತಾರಾನಾಥ ಗೌಡ, ಕಾರ್ಯದರ್ಶಿ ಪ್ರಸಾದ್‌ ಶೆಟ್ಟಿ, ಬೆಳ್ತಂಗಡಿ ತಾ| ಅಧ್ಯಕ್ಷ ಸುಧಾಕರ ಜೈನ್‌, ಬಂಟ್ವಾಳ ತಾ| ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಸಂಪಾಜೆ ವಲಯ ಅಧ್ಯಕ್ಷ ಆನಂದ ಗೌಡ, ಜಾಲ್ಸೂರು ವಲಯ ಅಧ್ಯಕ್ಷ ಪುರುಷೋತ್ತಮ ನಂಗಾರು, ಕುಸುಮಾಧರ ಗೌಡ, ರೋಹನ್‌ ಪೀಟರ್‌, ತಾ| ಸಂಚಾಲಕ ದಿವಾಕರ ಪೈ ಉಪಸ್ಥಿತರಿದ್ದರು. ಮೋಹನ್‌ ಅಡ್ತಲೆ ವಂದಿಸಿದರು. ಜಯರಾಮ ಮಾಸ್ತರ್‌ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಮರ್ಕಂಜ ರೈತ ಗೀತೆ ಹಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next