Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಟಿ ತನಿಖೆ ಯಾವ ರೀತಿ ನಡೆಯುತ್ತಿದೆ? ಎಫ್ಐಆರ್‌ನಲ್ಲಿ ಏನೆಲ್ಲ ದೋಷಗಳಿವೆ? ಚಿತಾವಣೆಯ ಕಾರಣಕರ್ತರು ಯಾರು ಎಲ್ಲವೂ ಗೊತ್ತಿದೆ. ಬೆಂಗಳೂರಿನಲ್ಲಿ ಡಿಜಿಪಿ ಅಲೋಕ್ ಕುಮಾರ್ ಸಮ್ಮುಖದಲ್ಲೇ ರೇವಣ್ಣ ವಿರುದ್ಧದ ದೂರು ಪ್ರತಿಯನ್ನು ಟೈಪ್ ಮಾಡಿ ಸಿದ್ಧಪಡಿಸಿ ಹೊಳೆನರಸೀಪುರಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
ಬೆಂಗಳೂರು: ದೂರವಾಣಿ ಕದ್ದಾಲಿಸಲು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರೇನು ಭಯೋ ತ್ಪಾದಕರೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
Related Articles
Advertisement
ಸರಕಾರ ಒಂದು ವರ್ಷ ಐಸಿಯುನಲ್ಲಿತ್ತು ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿ ಕ್ರಿಯಿ ಸಿದ ಡಿ.ಕೆ.ಶಿ., ಅವರು ಇನ್ನೇನು ಹೇಳಲು ಸಾಧ್ಯ? ಆದರೆ ಇದನ್ನು ಜನ ಹೇಳಬೇಕು; ನಾಯಕರಲ್ಲ. ಈ ಹಿಂದಿನ ಸರಕಾರದ ಕೆಟ್ಟ ಆಡಳಿತ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರ ಜೀವನದಲ್ಲಿ ನಮ್ಮ ಸರಕಾರದ ಆಡಳಿತದಿಂದ ಬದಲಾವಣೆ ಉಂಟಾಗಿದೆ ಎಂದರು.
ಯಾರ ದೂರವಾಣಿಯನ್ನೂ ಕದ್ದಾಲಿಸಿಲ್ಲ: ಪರಂಹುಬ್ಬಳ್ಳಿ: ರಾಜ್ಯ ಸರಕಾರ ಅಥವಾ ಗೃಹ ಇಲಾಖೆಯಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿತ ಯಾವುದೇ ನಾಯಕರ ದೂರವಾಣಿಯನ್ನೂ ಕದ್ದಾಲಿಸಿಲ್ಲ. ಒಂದು ವೇಳೆ ಕದ್ದಾಲಿಸಿರುವ ದಾಖಲೆಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರವಾಣಿ ಕದ್ದಾಲಿಸಬೇಕಾದರೆ ಗೃಹ ಇಲಾಖೆ ಕಾರ್ಯದರ್ಶಿಯಿಂದ ಆದೇಶ ಆಗಬೇಕು. ಅಂಥದ್ದೇನಾದರೂ ದಾಖಲೆಗಳನ್ನು ನೀಡಿದರೆ ಕ್ರಮ ತನಿಖೆ ಮಾಡಲಾಗುವುದು. ಒಂದೊಮ್ಮೆ ಖಾಸಗಿಯವರು ಕದ್ದಾಲಿಸುತ್ತಿದ್ದರೆ ನಮಗೆ ಸಂಬಂಧವಿಲ್ಲ. ಈ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.