Advertisement

ನಮ್ಮ ಚುನಾವಣಾ ಪದ್ಧತಿ ವಿಶ್ವಕ್ಕೇ ಮಾದರಿ

12:20 AM Apr 17, 2019 | Lakshmi GovindaRaju |

ಬೆಂಗಳೂರು: ಭಾರತದ ಚುನಾವಣೆ ಪದ್ಧತಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಮನೋಜ್‌ ರಾಜನ್‌ ಹೇಳಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗ ಬೆಂಗಳೂರು ವಿವಿ ಕಾನೂನು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮುಕ್ತ ಮತ್ತು ಪಾರದರ್ಶಕ ಚುನಾವಣೆ ಮೂಲಕ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಅಧಿಕಾರ ಹಸ್ತಾಂತರ ಮಾಡುವ ಕೆಲಸವನ್ನು ಭಾರತೀಯ ಚುನಾವಣಾ ಆಯೋಗ ಮಾಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ 90 ಕೋಟಿ ಮತದಾರರಿದ್ದಾರೆ. ಇಷ್ಟು ದೊಡ್ಡ ಮಟ್ಟದ ಜನರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಿಗಿಸುವುದು ಸವಾಲಿನ ಕೆಲಸ. ಇದೇ ಮೊದಲ ಬಾರಿ ಸಿ-ವಿಜಿಲ್‌ ಆ್ಯಪ್‌ ಮೂಲಕ, ನೀತಿ ಸಹಿಂತೆ ಉಲ್ಲಂಘನೆ ಕುರಿತು ಮತದಾರರೆ ದೂರು ನೀಡುತ್ತಿದ್ದಾರೆ. ಇಂತಹ ವ್ಯವಸ್ಥೆ ಬೇರೆಲ್ಲೂ ಇಲ್ಲ ಎಂದರು.

ಬೆಂಗಳೂರು ವಿವಿ ಉಪಕುಲಪತಿ ಪ್ರೊ.ಕೆ.ಆರ್‌.ವೇಣಲಗೋಪಾಲ್‌ ಮಾತನಾಡಿ, ಮತದಾರರು ಜಾಗೃತರಾದರೆ ಭ್ರಷ್ಟಾಚಾರ ತಡೆಯಬಹುದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಮಾದರಿಯಾಗಬೇಕು ಎಂದರು. ಕುಲಸಚಿವ ಪ್ರೊ.ಬಿ.ಕೆ ರವಿ, ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ವಿ.ಸುದೇಶ್‌ ಮತ್ತು ವಿದುದ್ಮಾನ ವಿಭಾಗದ ಸಂಯೋಜಕ ಡಾ.ವಾಹಿನಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next