ಮುಂಬೈ: ಜಮ್ಮು ಕಾಶ್ಮೀರದ ಕಾಶ್ಮೀರಿ ಪಂಡಿತರಿಗೆ ನಮ್ಮ ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ನಾವು ಕಾಶ್ಮೀರಿ ಪಂಡಿತರನ್ನು ಬೆಂಬಲಿಸುತ್ತೇವೆ. ಅಲ್ಲಿ ಪರಿಸ್ಥಿತಿ ಸಾಕಷ್ಟು ಅಸ್ಥಿರವಾಗಿದೆ. ಅವರಿಗಾಗಿ ನಮ್ಮ ಬಾಗಿಲು ತೆರೆದಿದೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
“ಕಾಶ್ಮೀರದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇಂತಹ ಸಮಯದಲ್ಲಿ ಮತ್ತೆ ಪರಿಸ್ಥಿತಿ ಮರುಕಳಿಸುತ್ತಿರುವುದು ವಿಷಾದನೀಯ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಮೀನುಗಾರಿಕೆ ಬೋಟ್‌ಗಳಲ್ಲಿ “ಬಯೋ ಟಾಯ್ಲೆಟ್’ ; ಸ್ವಚ್ಛತೆ, ಸುರಕ್ಷೆಗಾಗಿ ಶೌಚಾಲಯ ಕಡ್ಡಾಯ
ಈತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರದ ವಿಚಾರವಾಗಿ ಭಾರತೀಯ ಜನತಾ ಪಕ್ಷವನ್ನು ಟೀಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಕೇಜ್ರಿವಾಲ್, “1990 ರ ಯುಗ ಮತ್ತೆ ಬಂದಿದೆ. ಅವರ ಬಳಿ ಯಾವುದೇ ಯೋಜನೆಗಳಿಲ್ಲ. ಕಣಿವೆಯಲ್ಲಿ ಕೊಲೆಯಾದಾಗಲೆಲ್ಲ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ ಎಂಬ ಸುದ್ದಿ ಬರುತ್ತದೆ. ಈ ಸಭೆಗಳು ಸಾಕು, ಈಗ ನಮಗೆ ಕ್ರಮ ಬೇಕು” ಎಂದು ಕಿಡಿಕಾರಿದ್ದಾರೆ.