Advertisement
ಅವರು ಅಥಣಿ ಉತ್ತಿಷ್ಠ ಭಾರತ ಸಂಘಟನೆ ಸ್ಥಳೀಯ ಶ್ರೀ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಸ್ವಾಧೀನತೆಯಿಂದ ಸ್ವಾತಂತ್ರ್ಯದ ಕಡೆಗೆ ವಿಷಯವಾಗಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಚೋಳರು ಭಾರತವನ್ನು ಸುಮಾರು 2000 ವರ್ಷಗಳ ಕಾಲ ಆಳ್ವಿಕೆ ಮಾಡಿರುವುದಾಗಲಿ ಅಥವಾ ಅನೇಕ ಶತಮಾನಗಳ ಕಾಲ ಆಡಳಿತ ನಡೆಸಿದ್ದ ಹೊಯ್ಸಳ, ವಿಜಯ ನಗರ, ಪಾಂಡ್ಯರು ಸೇರಿದಂತೆ ಅನೇಕರ ಕುರಿತು ಹಾಗೂ ನಮ್ಮ ಶಿಲ್ಪ ಕಲೆ, ವಾಸ್ತು ಸೇರಿದಂತೆ ನಮ್ಮ ಸಂಸ್ಕೃತಿ ಬಿಂಬಿಸುವ ವಿಷಯಗಳ ಉಲ್ಲೇಖ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಎಲ್ಲಿಯೂ ಇಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿ ಆಡಳಿತ ನಡೆಸಿದ ಮೊಘಲರ, ಬ್ರಿಟಿಷರ ಆಡಳಿತವನ್ನು ಇತಿಹಾಸದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.
Related Articles
Advertisement
ಗದಗ ಕೆ.ಎಲ್.ಇ ಪ್ರಾಧ್ಯಾಪಕಿ ವೀಣಾ ಶಿಕ್ಷಣ ಮತ್ತು ರಾಷ್ಟ್ರೀಯತೆ ವಿಷಯದ ಕುರಿತು ಮಾತನಾಡಿದರು. ಪ್ರತಿ ಭಾಷಣದ ನಂತರ ಸಂವಾದ ನಡೆಯಿತು. ಉತ್ತಿಷ್ಠ ಭಾರತ ಅಥಣಿ ಸಂಯೋಜಕ ಚಂದ್ರಕಾಂತ ಉಂಡೊಡಿ ನಿರೂಪಿಸಿದರು. ವಿಚಾರ ಸಂಕಿರಣವನ್ನು ಉತ್ತಿಷ್ಠ ಭಾರತ ಸಂಘಟನೆಯ ಭಾರತ ಕರ್ಪೂರಮಠ, ವಿನಾಯಕ ಆಸಂಗಿ, ಮಂಜೂಶಾ ನಾಯಿಕ, ಡಾ.ವಿನಾಯಕ ಚಿಂಚೋಳಿಮಠ, ವೈಶಾಲಿ ಕುಲಕರ್ಣಿ, ಕುಮಾರ ಗಾಣಿಗೇರ, ಸಂಜಯ ನಾಯಿಕ, ಪ್ರಮೀಳಾ ನಾಯಿಕ, ಡಾ.ಅಮೃತ ಕುಲಕರ್ಣಿ, ಡಾ.ಪ್ರತೀಕಾ ಕುಲಕರ್ಣಿ, ಮೃಣಾಲಿನಿ ದೇಶಪಾಂಡೆ, ಕುಮಾರ ಪತ್ತಾರ ಸಂಘಟಿಸಿದ್ದರು.