ಬೆಂಗಳೂರು: ಕೇವಲ ರಸ್ತೆಗಳು ಸರಿಯಿಲ್ಲ ಎನ್ನುವ ಮಾತ್ರ ಐಟಿ ವಲಯ ಬೇರೆಡೆಗೆ ವರ್ಗಾವಣೆಯಾಗುವುದಿಲ್ಲ. ಹೊಸ ಕೈಗಾರಿಕೆ ಪ್ರಾರಂಭಿಸಲು ಪೂರಕವಾದ ವಾತಾವರಣ ಹೊಂದಿರಬೇಕು. ಅದು ನಮ್ಮಲ್ಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಮೇರಿಕಾ, ಸಿಂಗಾಪುರದೊಂದಿಗೆ ನಾವು ಸ್ಪರ್ಧಿಸುತ್ತಿದ್ದೇವೆಯೋ ಹೊರತು ಮುಂಬಯಿ ಹಾಗೂ ಹೈದರಾಬಾದ್ ಜತೆಗಲ್ಲ. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಖ್ಯಾತಿ ಪಡೆದುಕೊಂಡಿದೆ.
ಹೈದ್ರಾಬಾದ್ ಬೆಂಗಳೂರಿನೊಂದಿಗೆ ಸ್ಪರ್ಧಿಸಲು ಅನೇಕ ವರ್ಷಗಳ ಬೇಕು. ಇಲ್ಲವೇ ಅಲ್ಲಿ ಬಿಜೆಪಿ ಸರ್ಕಾರ ಪ್ರಾರಂಭವಾದ ಮೇಲೆ ನಮ್ಮೊಂದಿಗೆ ಸ್ಪರ್ಧಿಸಲು ಸಾಧ್ಯವಾಗ ಬಹುದು ಎಂದು ಹೇಳಿದರು.
ಇದನ್ನೂ ಓದಿ:ನಗರಸಭೆಯಲ್ಲಿದ್ದ ಫೋಟೋ ಒಂದೇ ದಿನದಲ್ಲಿ ಬದಲಾವಣೆ ; ಬಿಎಸ್‌ವೈಗೆ ಕೊಕ್, ಬೊಮ್ಮಾಯಿಗೆ ಸ್ಥಾನ!
ಆಜಾನ್, ಹಾಲಾಲ್ ವಿಚಾರಗಳು ಹಾಗೂ ವಿವಾದಗಳು ಜನಸಾಮಾನ್ಯರ ನಡುವೆ ಹುಟ್ಟಿಕೊಂಡಿದೆ. ಅದನ್ನು ತಿಳಿಗೊಳಿಸುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ಕಾಂಗ್ರೆಸ್ ರಾಜ್ಯದ ಹಿತಾಸಕ್ತಿಯಲ್ಲಿ ರಾಜಕಾರಣ ಮಾಡುವ ಮೂಲಕ ಜನಸಾಮಾನ್ಯರನ್ನು ಬಲಿಕೊಡುತ್ತಿದ್ದಾರೆ ಎಂದು ಹೇಳಿದರು.