Advertisement

Sikh separatist ವಿಫಲವಾದ ಸಂಚು; ಅಮೆರಿಕ ಆರೋಪಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

05:18 PM Dec 20, 2023 | Team Udayavani |

ಹೊಸದಿಲ್ಲಿ: ”ಭಾರತದ ಬದ್ಧತೆಯು ಕಾನೂನಿನ ನಿಯಮವಾಗಿದ್ದು, ಯಾರಾದರೂ ಮಾಹಿತಿ ನೀಡಿದರೆ ಅದನ್ನು ಪರಿಶೀಲಿಸಲಾಗುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ ಪ್ರತ್ಯೇಕತಾವಾದಿಯನ್ನು ಗುರಿಯಾಗಿಸಿಕೊಂಡ ವಿಫಲ ಸಂಚಿನ ಕುರಿತು ಭಾರತದ ಮೇಲಿನ ಅಮೆರಿಕ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಫೈನಾನ್ಷಿಯಲ್ ಟೈಮ್ಸ್ ಗೆ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ,” ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸಲು ಬಲವಾದ ಉಭಯಪಕ್ಷೀಯ ಬೆಂಬಲವಿದೆ. ರಾಜತಾಂತ್ರಿಕ ಸಂಬಂಧಗಳೊಂದಿಗೆ ಕೆಲವು ಘಟನೆಗಳನ್ನು ಜೋಡಿಸುವುದು ಸೂಕ್ತವಲ್ಲ”ಎಂದು ಪ್ರತಿಕ್ರಿಯಿಸಿದ್ದಾರೆ.

“ಯಾರಾದರೂ ನಮಗೆ ಯಾವುದೇ ಮಾಹಿತಿಯನ್ನು ನೀಡಿದರೆ, ನಾವು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇವೆ. ನಮ್ಮ ನಾಗರಿಕರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೆ, ಅದನ್ನು ನೋಡಲು ನಾವು ಸಿದ್ಧರಿದ್ದೇವೆ. ಕಾನೂನು ಸುವ್ಯವಸ್ಥೆಗೆ ನಮ್ಮ ಬದ್ಧತೆ ಇದೆ ” ಎಂದು ಮೋದಿ ಹೇಳಿದ್ದಾರೆ.

ಯುಎಸ್ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಹತ್ಯೆಗೈಯುವ ವಿಫಲ ಸಂಚಿನಲ್ಲಿ ನಿಖಿಲ್ ಗುಪ್ತಾ ಭಾರತದ ಸರಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡುತ್ತಿದ್ದಾನೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಆರೋಪಗಳ ಬಳಿಕ ತನಿಖೆಗೆ ಭಾರತ  ತನಿಖಾ ಸಮಿತಿಯನ್ನೂ ರಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next