Advertisement

“ನಮ್ಮ ತೆಂಗು’ಕ್ಯಾಲೆಂಡರ್‌

02:51 PM Jan 08, 2018 | |

ಹೊಸವರ್ಷ ಬಂದಾಗ ಥರಹೇವಾರಿ ಕ್ಯಾಲೆಂಡರ್‌ಗಳು ಮಾರುಕಟ್ಟೆಗೆ ಬರುತ್ತವೆ. ಅದೇ ರೀತಿ, 3 ವರ್ಷಗಳಿಂದ “ನಮ್ಮ ತೆಂಗು’ ಉತ್ಪಾದಕರ ಒಕ್ಕೂಟ ಕೂಡ ಕ್ಯಾಲೆಂಡರ್‌ನ್ನು ಪ್ರಕಟಿಸುತ್ತಿದೆ. 2018ರ ಕ್ಯಾಲೆಂಡರ್‌ನಲ್ಲಿ ತೆಂಗಿನ ಉತ್ಪನ್ನಗಳ ಬಳಕೆಯಿಂದ ಆಗುವ ಆರೋಗ್ಯದ ಲಾಭಗಳನ್ನು ಕುರಿತು ಪ್ರಕಟಿಸಿದೆ. 

Advertisement

ತೆಂಗಿನೆಣ್ಣೆಯ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಯಿದೆ. ಅದರಲ್ಲಿರುವುದು ಮಧ್ಯಮ ಸಂಕಲೆ ಕೊಬ್ಬುಗಳು. ಇವುಗಳು ಕೆಟ್ಟ ಕೊಲೆಸ್ಟ್ರಾಲ್‌ ತಗ್ಗಿಸಿ, ಒಳ್ಳೆಯ ಕೊಲೆಸ್ಟ್ರಾಲ್‌ ಅನ್ನು ಹೆಚ್ಚಿಸುತ್ತವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ವಾಸಿಯಾಗುತ್ತವೆ. ತೆಂಗಿನೆಣ್ಣೆಯಿಂದ ಅಲೆl„ಮರ್, ಪಿಡ್ಸ್‌ ವಾಸಿಯಾಗುತ್ತವೆ. ತೆಂಗಿನೆಣ್ಣೆಯಲ್ಲಿ ಕಂಡುಬರುವ ಶೇ.50ರಷ್ಟು ಲಾರಿಕ್‌ ಆ್ಯಸಿಡ್‌ ಎದೆ ಹಾಲು ಬಿಟ್ಟರೆ ಮತ್ತಿನ್ನೆಲ್ಲೂ ಸಿಗುವುದಿಲ್ಲ. ಇವೆಲ್ಲ ಮಾಹಿತಿಗಳು ಕ್ಯಾಲೆಂಡರ್‌ನಲ್ಲಿ ಲಭ್ಯ. ಈ ಬಾರಿಯ ಕ್ಯಾಲೆಂಡರ್‌ ತೆಂಗು ಬೆಳೆಗಾರರಿಗಲ್ಲದೆ, ಗ್ರಾಹಕರಿಗೂ ಅನುಕೂಲಕರವಾಗಿದೆ.

ಕ್ಯಾಲೆಂಡರ್‌ ಖರೀದಿಸಲು ರೂ. 120 (ಅಂಚೆ ವೆಚ್ಚ ಸೇರಿ) ಮನಿ ಆರ್ಡರ್‌ ಕಳಿಸಬಹುದು
ವಿಳಾಸ: ನಮ್ಮ ತೆಂಗು ಉತ್ಪಾದಕರ ಒಕ್ಕೂಟ(ರಿ)
          ಮೊದಲನೇ ಮಹಡಿ, ಮಹಾಲಕ್ಷ್ಮಿ ಬಡಾವಣೆ ಮುಖ್ಯರಸ್ತೆ
         ಚಿ.ನಾ.ಹಳ್ಳಿ- 572214 ತುಮಕೂರು ಜಿಲ್ಲೆ
         ದೂ: 8762068755

Advertisement

Udayavani is now on Telegram. Click here to join our channel and stay updated with the latest news.

Next