Advertisement

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌

01:56 AM Nov 30, 2024 | Team Udayavani |

ಹೊಸದಿಲ್ಲಿ: ಬಲ್ಕ್ ಮೆಸೇಜ್‌ಗಳ (ಒಟ್ಟಿಗೆ ಬರುವ ಅನೇಕ ಸಂದೇಶಗಳು) ಮೂಲ ಪತ್ತೆ ಮಾಡುವ ವ್ಯವಸ್ಥೆ ರೂಪಿಸುವಂತೆ ಟೆಲಿಕಾಂ ಸಂಸ್ಥೆಗಳಿಗೆ ಭಾರ ತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಿಧಿಸಿರುವ ನಿಯಮಾವಳಿಯಿಂದ ಒಟಿಪಿ ಸೇವೆಗಳಿಗೆ ಯಾವುದೇ ತೊಂದರೆಯಾ ಗುವುದಿಲ್ಲ ಎಂದು ಟ್ರಾಯ್‌ ಸ್ಪಷ್ಟನೆ ನೀಡಿದೆ. ಸೈಬರ್‌ ವಂಚನೆಗಳಿಗೆ ಕಡಿವಾಣ ಹಾಕಲು ಟ್ರಾಯ್‌ ರೂಪಿಸಿರುವ ನಿಯಮಾವಳಿಯನ್ನು ಅನು ಸರಿಸದ ಟೆಲಿಕಾಂ ಸಂಸ್ಥೆಗಳ ಗ್ರಾಹಕರಿಗೆ ಡಿ.1ರಿಂದ ಒಟಿಪಿ ಸೇವೆ ನಿರ್ಬಂಧಿಸಲಾಗುವುದು ಎಂಬ ವಿಷಯ ಜಾಲತಾಣಗಳಲ್ಲಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಟ್ರಾಯ್‌ ನೆಟ್‌ ಬ್ಯಾಂಕಿಂಗ್‌, ಆಧಾರ್‌ ಒಟಿಪಿ ಸೇರಿದಂತೆ ಅಗತ್ಯ ಒಟಿಪಿ ಸೇವೆಗಳು ವಿಳಂಬವಿಲ್ಲದೆ ಗ್ರಾಹಕರ ಮೊಬೈಲ್‌ಗೆ ಲಭ್ಯವಾಗಲಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next