Advertisement

ಓಟಿಪಿ ನಂಬರ್‌ ಪಡೆದು 1.80 ಲಕ್ಷ ವಂಚನೆ

11:00 AM Mar 27, 2023 | Team Udayavani |

ಬೆಂಗಳೂರು: ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ನಂಬಿಸಿ ಓಟಿಪಿ ನಂಬರ್‌ ಪಡೆದ ಸೈಬರ್‌ ಕಳ್ಳರು ವೃದ್ಧೆಗೆ 1.80 ಲಕ್ಷ ರೂ. ವಂಚಿಸಿದ್ದಾರೆ.

Advertisement

ಲ್ಯಾಂಗ್‌ ಫೋರ್ಡ್‌ಟೌನ್‌ ಮೀರಾ (77) ವಂಚನೆಗೊಳಗಾದವರು.

ಜ.27ರಂದು ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ಮೀರಾ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತರು, ನಿಮ್ಮ ಬ್ಯಾಂಕ್‌ ಖಾತೆಯ ಕೆವೈಸಿ ಅಪ್‌ಡೇಟ್‌ ಮಾಡಬೇಕಿದ್ದು, ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಎಂದು ನಂಬರ್‌ವೊಂದನ್ನು ನೀಡಿದ್ದರು.

ಅದರಂತೆ ಮೀರಾ ಅಪರಿಚಿತರು ಕೊಟ್ಟ ನಂಬರ್‌ ಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಮೊಬೈಲ್‌ಗೆ ಬಂದಿರುವ ಓಟಿಪಿ ನಂಬರ್‌ ಹೇಳುವಂತೆ ಸೂಚಿಸಿದ್ದರು. ಮೀರಾ ಓಟಿಪಿ ನಂಬರ್‌ ಹೇಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಮೀರಾ ಬ್ಯಾಂಕ್‌ ಖಾತೆಯಿಂದ 1.80 ಲಕ್ಷ ರೂ. ಕಡಿತಗೊಂಡಿತ್ತು.

ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಬೆಳಕಿಗೆ ಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next