Advertisement

ವಾಹನವಿಲ್ಲದೆ ಪರದಾಟ: 7 ಕಿ.ಮೀ ನಡೆದ ತುಂಬು ಗರ್ಭಿಣಿ!

01:39 PM May 10, 2021 | Team Udayavani |

ಕೊಪ್ಪಳ: ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ತಾಲೂಕಿನ ನರೇಗಲ್ ಗ್ರಾಮದ ಲಕ್ಷ್ಮೀ ಪೂಜಾರ ಅವರು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ಚೆಕಪ್ ಗೆ ಹೋಗಬೇಕಿತ್ತು. ಆದರೆ ಪೊಲೀಸರು ಎಲ್ಲ ವಾಹನಗಳನ್ನ ಹಿಡಿದು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ವಾಹನ ಚಾಲಕರು ಪೊಲೀಸರಿಗೆ ಹೆದರಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆ ತರಲು ನಿರಾಕರಿಸಿದ್ದರು. ಇದರಿಂದ ಗ್ರಾಮದಿಂದ 7 ಕಿಮೀ ಕಾಲ್ನಡಿಗೆಯಲ್ಲೆ ಕೊಪ್ಪಳಕ್ಕೆ ಆಗಮಿಸಿದ್ದ ಗರ್ಭಿಣಿಯು ನಗರದಲ್ಲೂ ಹೆದ್ದಾರಿ ರಸ್ತೆಯ ಮೂಲಕ ಖಾಸಗಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲೆ ತೆರಳುತ್ತಿದ್ದರು. ಆಸ್ಪತ್ರೆಗೆ ತೆರಳಲು ಪರದಾಡಿದರು.

ಇದನ್ನೂ ಓದಿ:ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

ಇದನ್ನು ಮನಗಂಡ ಮಾಧ್ಯಮ ಮಿತ್ರರು ಕೂಡಲೇ ಅವರಿಗೆ ಕಾರಿನ ವ್ಯವಸ್ಥೆ ಮಾಡಿ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next