Advertisement

ಪೊಲೀಸರಿಗೆ ಇತರೆ ಇಲಾಖೆಗಳ ಸಹಕಾರ ಅಗತ್ಯ

12:07 PM Feb 10, 2017 | |

ಪಿರಿಯಾಪಟ್ಟಣ: ಶೋಷಿತರಿಗೆ ಕೇವಲ ಪೊಲೀಸ್‌ ಇಲಾಖೆಯ ಒಂದರಿಂದಲೇ ನ್ಯಾಯ ದೊರೆಯಲು ಸಾಧ್ಯವಿಲ್ಲ. ಇದಕ್ಕೆ ಇತರ ಇಲಾಖೆಗಳೂ ಕೈ ಜೋಡಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿ ತಿಳಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ ನಡೆದ ದಲಿತ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯು ತನ್ನ ಕಾರ್ಯ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಲಿತರ ಪರವಾಗಿ ಇಲಾಖೆ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸರಿಯಲ್ಲ ಎಂದು ತಿಳಿಸಿದರು.

ಇದೇ ವೇಳೆ ಅಕ್ರಮ ಬಡ್ಡಿ ವ್ಯವಹಾರ, ಗಿರಿಜನ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಜಾಗ ಒತ್ತುವರಿ,  ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಡಿ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಸೇರಿದಂತೆ ಹಲವಾರು ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದಕ್ಕೆ ಪ್ರತಿ ಕ್ರಿಯಿಸಿದ ಕಲಾ ಅವರು, ಕಾನೂನು ಬಾಹಿರ ವಾದ ಕೃತ್ಯಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಿರಿಯ ವಕೀಲ ಬಿ.ವಿ.ಜವರೇಗೌಡ ಮಾತನಾಡಿ, ಸ್ವಾತಂತ್ರ ಬಂದು 68 ವರ್ಷಗಳಾಗಿದ್ದರೂ ಹಕ್ಕು ಕೇಳುತ್ತಿರುವುದು ದುರದೃಷ್ಟಕರವಾಗಿದೆ. ಹಕ್ಕು ದಲಿತರಿಗೆ ಇಷ್ಟರಲ್ಲಿ ದೊಡ್ಡ ಶಕ್ತಿಯಾಗಬೇಕಿತ್ತು. ಪ್ರತಿ ಹಳ್ಳಿಗಳಲ್ಲೂ ಜಾಗೃತರಾಗಬೇಕು, ಕಾನೂನು ಪರಿಪಾಲನೆಯಾಗಿ ಎಲ್ಲಾ ಸೌಲಭ್ಯವನ್ನೂ ಅರ್ಹತೆ ಮೇಲೆ ಪಡೆಯುವಂತಾಗಬೇಕು ಎಂದು ತಿಳಿಸಿದರು.

ಸರ್ಕಾರಿ ಅಭಿಯೋಜಕ ಅಜಿತ್‌ ದೇವರ ಮನಿ ಮಾತನಾಡಿ, ಶೋಷಣೆ ಮತ್ತು ಅಸ್ಪೃಶ್ಯತೆ ಇರುವವರೆಗೂ ಮೀಸಲಾತಿ ಅವಶ್ಯಕತೆ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಸದುಪ ಯೋಗಪಡಿಸಿಕೊಳ್ಳಬೇಕು ಎಂದರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ, ತಮ್ಮ ಕಣ್ಮುಂದೆ ನಡೆದ ಕೃತ್ಯಗಳ ಕುರಿತು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬೇಕು.

Advertisement

ಹೀಗೆ ಸಾಕ್ಷಿ ಹೇಳದ ಕಾರಣ ಅನೇಕ ತಪ್ಪಿತಸ್ಥರು ಇಂದು ಪಾರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಸದಾ ಕಾಲವೂ ಕಾನೂನು ನಿಮ್ಮ ನೆರವಿಗಿರುತ್ತದೆ. ಸಣ್ಣಪುಟ್ಟ ಪಂಗಡ ಮತ್ತು ಗುಂಪುಗಳನ್ನಾಗಿ ಮಾಡಿಕೊಂಡು ಹೊಡೆ ದಾಡುವುದನ್ನು ಬಿಟ್ಟು ಪ್ರಗತಿಯತ್ತ ಮುನ್ನಡೆಯುವಂತೆ ಕಿವಿಮಾತು ಹೇಳಿದರು. ಇದೇ ವೇಳೆ ಕಾನೂನು ಅರಿವಿನ ಬಗ್ಗೆ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. 

ಹುಣಸೂರು ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಹರೀಶ್‌ ಪಾಂಡೆ, ಸರ್ಕಲ್‌ ಇನ್ಸ್‌ಪೆಕ್ಟರ್‌ ಎಚ್‌.ಎನ್‌.ಸಿದ್ದಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಶಿರಸ್ತೇದಾರ್‌ ಪ್ರಕಾಶ್‌, ತಾಪಂ ಸದಸ್ಯ ಟಿ.ಈರಯ್ಯ, ಡಾ. ಬಿ.ಆರ್‌. ಅಂಬೇಡ್ಕರ್‌ ನಿಗಮದ ಸದಸ್ಯ ಕರಡೀಪುರ ಕುಮಾರ್‌, ದಲಿತ ಮುಖಂಡರಾದ ಪಿ.ಪಿ. ಮಹದೇವ್‌, ವಿಜಯಕುಮಾರ್‌, ಭೂತನಹಳ್ಳಿ ಶಿವಣ್ಣ, ಎಚ್‌.ಎಂ. ಚನ್ನಯ್ಯ, ಕೆ.ಬಿ. ಮೂರ್ತಿ, ಜೋಗನಹಳ್ಳಿ ದೇವರಾಜು, ಸಿ.ಎಸ್‌.ಜಗದೀಶ್‌, ಶೇಖರ್‌, ಸೋಮಶೇಖರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next