ವಾಷಿಂಗ್ಟನ್: ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ನಡೆಯದಿದ್ದ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ (ಮಾರ್ಚ್ 27) ಅದ್ದೂರಿಯಾಗಿ ನಡೆಯಿತು. ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿಯರಾದ ವೀನಸ್ ವೀಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ಜೀವನ ಚರಿತ್ರೆಯನ್ನಾಧರಿಸಿದ “ಕಿಂಗ್ ರಿಚರ್ಡ್” ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟ ವಿಲ್ ಸ್ಮಿತ್ ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಆಸ್ಕರ್ ವೇದಿಕೆಯಲ್ಲೇ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ವಿಲ್ ಸ್ಮಿತ್! ಅಷ್ಟಕ್ಕೂ ಆಗಿದ್ದೇನು?
The Eyes of Tammy Faye ಸಿನಿಮಾದಲ್ಲಿನ ನಟನೆಗಾಗಿ ನಟಿ ಜೆಸ್ಸಿಕಾ ಚಾಸ್ಟೈನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ. ಶಾನ್ ಹೇಡರ್ ನಿರ್ದೇಶನದ ಕೋಡಾ (CODA) ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.
94ನೇ ವರ್ಷದ ಆಸ್ಕರ್ ಪ್ರಶಸ್ತಿಯ ಸಮಾರಂಭದಲ್ಲಿ ಜೇನ್ ಕಾಂಪಿಯನ್ (ದಿ ಪವರ್ ಆಫ್ ದಿ ಡಾಗ್) ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದಿದ್ದು, ಜೆನ್ನಿ ಬೀವನ್ ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Related Articles
ಜಪಾನ್ ನ ಡ್ರೈವ್ ಮೈ ಕಾರ್ ಚಿತ್ರ ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗಳಿಸಿದೆ. ಡ್ಯೂನ್ ಚಿತ್ರ ಒಟ್ಟು ಆರು ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಧ್ವನಿ, ವಿನ್ಯಾಸ, ಸಂಕಲನ, ಛಾಯಾಗ್ರಹಣ, ವಿಶ್ಯುವಲ್ ಎಫೆಕ್ಟ್ ಸೇರಿದಂತೆ ಆರು ವಿಭಾಗಗಳಲ್ಲಿಯೂ ಡ್ಯೂನ್ ಸಿನಿಮಾಕ್ಕೆ ಪ್ರಶಸ್ತಿ ಲಭಿಸಿದೆ.
ಕೋಡಾ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಟ್ರಾಯ್ ಕೊಟ್ಸರ್ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದು, ವೆಸ್ಟ್ ಸೈಡ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅರಿಯಾನಾ ಡಿಬೋಸ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಮ್ಮರ್ ಆಫ್ ಸೋಲ್ ಅತ್ಯುತ್ತಮ ಸಾಕ್ಷ್ಯ ಚಿತ್ರ, ಎನ್ಕಾಂಟೋ ಅತ್ಯುತ್ತಮ ಅನಿಮೇಟೆಡ್ ಸಿನಿಮಾ. ದಿ ಕ್ವೀನ್ ಆಫ್ ದಿ ಬಾಸ್ಕೆಟ್ ಬಾಲ್ ಅತ್ಯುತ್ತಮ ಕಿರುಚಿತ್ರವಾಗಿದೆ.