Advertisement

ಆಸ್ಕರ್‌ ರಾಜಕೀಯ ಶ್ರೇಷ್ಠ ಸಂತ: ಡಾ|ವೀರಪ್ಪ ಮೊಯ್ಲಿ

02:14 AM Oct 09, 2021 | Team Udayavani |

ಮಂಗಳೂರು: ನಾಲ್ಕು ದಶಕಗಳ ಕಾಲ ಲೋಕಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿಸಿ, ಕೇಂದ್ರ ಸಚಿವರೂ ಆಗಿ ಸೇವೆ ಸಲ್ಲಿಸಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರು ರಾಜಕೀಯ ಶ್ರೇಷ್ಠ ಸಂತ ಎಂದು ಮಾಜಿ ಕೇಂದ್ರ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.

Advertisement

ಸೆ. 13ರಂದು ನಿಧನಹೊಂದಿದ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸಲು ಅವರ ಅಭಿಮಾನಿಗಳು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ “ನೆನಪಿನ ಅಂಗಳದಲ್ಲಿ ಆಸ್ಕರ್‌ ಅಣ್ಣ… ಪ್ರಸ್ತುತಿ’ ಕಾರ್ಯಕ್ರಮದಲ್ಲಿ ಮೊಲಿ ದಿಕ್ಸೂಚಿ ಭಾಷಣ ಮಾಡಿದರು.

ಸಜ್ಜನ ರಾಜಕಾರಣಿಯಾಗಿದ್ದ ಆಸ್ಕರ್‌ ಅವರು ಶಿಸ್ತು ಮತ್ತು ಪ್ರಾಮಾಣಿಕತೆಯ ಸಾಕಾರ ಮೂರ್ತಿ. ಯಾರನ್ನೂ ನೋಯಿಸಿದವರಲ್ಲ; ಯಾರೊಂದಿಗೂ ಭಿನ್ನಾಭಿಪ್ರಾಯ ಹೊಂದಿರಲಿಲ್ಲ. ಆದರ್ಶವ್ಯಕ್ತಿತ್ವ ದ ಅವರ ಸೇವೆ ನಮಗೆ ಇನ್ನೂ ಬೇಕಿತ್ತು ಎಂದು ಮೊಯ್ಲಿ ಹೇಳಿದರು.

ಕೇಂದ್ರ ಸಚಿವರಾಗಿ ಆಸ್ಕರ್‌ ಅವರು ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಗೆ ಮಂಜೂರಾತಿ ನೀಡಿದ್ದರು. ಆಗುಂಬೆ ಘಾಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ್ದರು. ಆದರೆ ಅವರು ತಮ್ಮ ಕೆಲಸಗಳನ್ನು ಹೇಳಿಕೊಳ್ಳಲು ಹೋಗಿಲ್ಲ ಎಂದರು.

ಮಾಜಿ ಮುಖ್ಯ ಸಚೇತಕ ಕಾ| ಗಣೇಶ್‌ ಕಾರ್ಣಿಕ್‌ ಅವರು “ಸಂಸದೀಯ ಮೌಲ್ಯಗಳು ಮತ್ತು ಆಸ್ಕರ್‌ ಫೆರ್ನಾಂಡಿಸ್‌’ ವಿಷಯದ ಬಗ್ಗೆ ಮಾತನಾಡಿ, ಆಸ್ಕರ್‌ ಅವರು ಯಾವತ್ತೂ ವಿಭಜಿತ ಮಾನಸಿಕತೆಗೆ ಅವಕಾಶ ನೀಡಿರಲಿಲ್ಲ; ಅವರ ಜೀವನ ಮೌಲ್ಯಗಳು ಅನು ಕರಣೀಯ ಎಂದರು.

Advertisement

ಇದನ್ನೂ ಓದಿ:ಪೆರಿಷಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ!

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿ, ಆಸ್ಕರ್‌ ಅವರು ಸಮಾಜಕ್ಕೆ ಅರ್ಥ ಪೂರ್ಣ ಸೇವೆಯನ್ನು ಒದಗಿಸಿದ್ದು, ಅವರ ಸಮಾಜ ಮುಖೀ ಚಿಂತನೆ ಮಾದರಿಯಾಗಿದೆ ಎಂದರು.

ಮಾಜಿ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಸ್ವಾಗತಿಸಿದರು. ಸದಸ್ಯ ಎಂ.ಜಿ. ಹೆಗಡೆ ವಂದಿಸಿದರು. ಪ್ರೊ| ಮಾಲಿನಿ ಹೆಬ್ಟಾರ್‌ ಕಾರ್ಯಕ್ರಮ ನಿರ್ವಹಿಸಿದರು.

ಆಸ್ಕರ್‌ ಅವರ ಪತ್ನಿ ಬ್ಲೋಸಂ ಅವರ ಪರವಾಗಿ ಕುಟುಂಬಸ್ಥರಾದ ವಾಲ್ಟರ್‌ ಡಿ’ಸೋಜಾ ಅವರಿಗೆ ಹೂವಿನ ಗಿಡ ನೀಡಿ ಗೌರವಿಸಲಾಯಿತು. ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್‌, ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಬ್ರಾಹಿಂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next