Advertisement

ಆಸ್ಕರ್‌ಗೆ ಪ್ರವೇಶ ಪಡೆದಿರುವ “ಚೆಲ್ಲೋ ಶೋ’ : ಪೆರಿಯಡ್ಕದ ಯುವಕನ ಸಿನೆಮಾ ಯಾನ

09:28 AM Sep 22, 2022 | Team Udayavani |

ಪುತ್ತೂರು: ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದಿರುವ “ಚೆಲ್ಲೋ ಶೋ’ ಸಿನೆಮಾದ ಸಂಕಲನಕಾರ (ಎಡಿಟರ್‌) ಆಗಿ ಕಾರ್ಯ ನಿರ್ವಹಿಸಿದ್ದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಪವನ್‌ ಭಟ್‌.

Advertisement

ಎಂಜಿನಿಯರಿಂಗ್‌ ಪದವೀಧರ ನಾಗಿರುವ ಪವನ್‌ ಬ್ಯಾಂಕ್‌ ಉದ್ಯೋಗಿ ಯಾಗಿದ್ದ ಗೋಪಾಲಕೃಷ್ಣ ಭಟ್‌ ಮತ್ತು ಸರೋಜಾ ಭಟ್‌ ದಂಪತಿಯ ಪುತ್ರ. ಬೆಂಗಳೂರಿನಲ್ಲಿ ನೆಲೆಸಿದ್ದು ಸಿನೆಮಾ ರಂಗದಲ್ಲಿ ಬಹು ಬೇಡಿಕೆಯುಳ್ಳ ಎಡಿಟರ್‌ ಆಗಿ ರೂಪುಗೊಳ್ಳುತ್ತಿದ್ದಾರೆ.

ಪವನ್‌ ಶಿಕ್ಷಣ ಪಡೆದದ್ದು ಬೆಂಗಳೂರು ಹಾಗೂ ಕೋಲ್ಕತಾದಲ್ಲಿ. ಪಿಯುಸಿ ಕಲಿಯುವಾಗಲೇ ಸಿನೆಮಾದ ಬಗ್ಗೆ ಅಪಾರ ಆಸಕ್ತಿ. ಶೈಕ್ಷಣಿಕ ಕ್ಷೇತ್ರದಲ್ಲಿ ಎಂಜಿನಿಯರ್‌ ವಿಭಾಗದಲ್ಲಿ ಕಂಪ್ಯೂಟರ್‌ ಕ್ಷೇತ್ರ ಆರಿಸಿಕೊಂಡ ಪರಿಣಾಮ ಎಡಿಟಿಂಗ್‌ ವಿಭಾಗ ಕೂಡ ಹತ್ತಿರವಾಯಿತು. ಪದವಿಯ ಬಳಿಕ ಮುಂಬಯಿಯಲ್ಲಿ 2 ವರ್ಷ ಎಡಿಟಿಂಗ್‌ಗೆ ಸಂಬಂಧಿಸಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ಏಕೈಕ ಕನ್ನಡಿಗ
“ಚೆಲ್ಲೋ ಶೋ’ ಸಿನೆಮಾದಲ್ಲಿ ಕೆಲಸ ನಿರ್ವಹಿಸಿದ ಏಕೈಕ ಕನ್ನಡಿಗ ಪವನ್‌. 3 ವರ್ಷಗಳಿಂದ ಈ ಸಿನೆಮಾದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಕರ್‌ಗೆ ಪ್ರವೇಶ ಪಡೆಯುವ ಯೋಚನೆ ಮಾಡಿರಲಿಲ್ಲ. ಪ್ರವೇಶ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಪವನ್‌.

ನಾಲ್ಕು ಪೂರ್ಣ ಸಿನೆಮಾ ಪವನ್‌ ಭಟ್‌ ನಾಲ್ಕು ಸಿನೆಮಾಗಳಿಗೆ ಪೂರ್ಣ ಪ್ರಮಾಣದಲ್ಲಿ ಎಡಿಟರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. 20 ಅಧಿಕ ಸಿನೆಮಾಗಳಲ್ಲಿ ಕೆಲಸ ನಿರ್ವಹಿಸಿದ ಅನುಭವಿ. “ಭಸ್ಮಾಸುರ್‌’ ಪ್ರಥಮ ಸಿನೆಮಾ. ಇದು ದೇಶ – ವಿದೇಶಗಳಲ್ಲಿ ಹಲವು ಪ್ರಶಸ್ತಿ ಪಡೆದಿದೆ. ನನಗೆ ಕನ್ನಡ ಚಿತ್ರದಲ್ಲಿ ಕೆಲಸ ಮಾಡುವ ಆಸೆ ಇದೆ. ಈಗಾಗಲೇ ಒಂದು ಸಿನೆಮಾ ಮಾತುಕತೆಯಲ್ಲಿದೆ ಎನ್ನುತ್ತಾರೆ ಅವರು.

Advertisement

“ಛೆಲ್ಲೋ ಶೋ’ದಲ್ಲೇನಿದೆ?
9 ವರ್ಷದ ಬಾಲಕನೊಬ್ಬನಿಗೆ ಸಿನೆಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು “ಚೆಲ್ಲೋ ಶೋ’ ವಿವರಿಸುತ್ತದೆ. ಈ ಸಿನೆಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಿತ್ತು. ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಸಿನೆಮಾ ಸ್ಪೇನ್‌ನ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಸ್ಮೈಕ್‌ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅ. 14ರಂದು “ಲಾಸ್ಟ್‌ ಫಿಲಂ ಶೋ’ (ಇಂಗ್ಲಿಷ್‌) ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ : ಟಾಟಾ ನೆಕ್ಸಾನ್‌ ಹೊಸ ವೇರಿಯೆಂಟ್‌; ವೈರ್‌ಲೆಸ್‌ ಚಾರ್ಜರ್‌ ಸೇರಿ ಹಲವು ಸೌಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next