Advertisement

ಅಲ್ ಕೈದಾ ಹೊಣೆ ಹೊತ್ತಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಹಂಝಾ ಸಾವು: ವರದಿ

09:33 AM Aug 02, 2019 | Nagendra Trasi |

ವಾಷಿಂಗ್ಟನ್: ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಲ್ ಕೈದಾ ಸಂಘಟನೆಯ ಹೊಣೆಹೊತ್ತುಕೊಂಡಿದ್ದ ಪುತ್ರ ಹಂಝಾ ಕೂಡಾ ಸಾವನ್ನಪ್ಪಿರುವುದಾಗಿ ಅಮೆರಿಕದ ಮಾಧ್ಯಮಗಳ ವರದಿ ತಿಳಿಸಿದೆ.

Advertisement

ಎನ್ ಬಿಸಿ ವರದಿ ಪ್ರಕಾರ, ಅಮೆರಿಕದ ಮೂವರು ಅಧಿಕಾರಿಗಳು ಲಾಡೆನ್ ಪುತ್ರ ಹಂಝಾ ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವುದಾಗಿ ಹೇಳಿದ್ದು, ಆದರೆ ಯಾವ ಸ್ಥಳ ಮತ್ತು ಯಾವಾಗ ಎಂಬ ವಿವರ ನೀಡಲು ನಿರಾಕರಿಸಿರುವುದಾಗಿ ತಿಳಿಸಿದೆ.

ಕಳೆದ ಎರಡು ವರ್ಷಗಳ ಅಮೆರಿಕದ ಕಾರ್ಯಾಚರಣೆಯಲ್ಲಿ ಹಂಝಾ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧಿಕಾರಿಗಳು ಖಚಿತಪಡಿಸಿರುವುದಾಗಿ ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಏತನ್ಮಧ್ಯೆ ಒಸಾಮಾ ಬಿನ್ ಲಾಡೆನ್ ನ ಪುತ್ರನ ಸಾವಿನ ಕುರಿತು ಎನ್ ಬಿಸಿ ವರದಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಬೇಕಾಗಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next