Advertisement

Badminton: ಓರ್ಲೀನ್ಸ್‌ ಬ್ಯಾಡ್ಮಿಂಟನ್‌: ಮಿಥುನ್‌, ಪ್ರಿಯಾಂಶು ಮುನ್ನಡೆ

08:53 PM Apr 05, 2023 | Team Udayavani |

ಓರ್ಲೀನ್ಸ್‌ (ಫ್ರಾನ್ಸ್‌): ಭಾರತದ ಸಮೀರ್‌ ವರ್ಮ ಓರ್ಲೀನ್ಸ್‌ ಮಾಸ್ಟರ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಆದರೆ ಮಿಥುನ್‌ ಮಂಜುನಾಥ್‌, ಪ್ರಿಯಾಂಶು ರಾಜಾವತ್‌ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್‌ನ‌ ನಾಟ್‌ ಎನ್‌ಗುಯೆನ್‌ ವಿರುದ್ಧ ಸಮೀರ್‌ ವರ್ಮ ಮೊದಲ ಗೇಮ್‌ ಗೆದ್ದರೂ ಬಳಿಕ ಹಿನ್ನಡೆ ಅನುಭವಿಸುತ್ತ ಹೋದರು. ಎನ್‌ಗುಯೆನ್‌ ಗೆಲುವಿನ ಅಂತರ 19-21, 21-19, 21-17.

Advertisement

ಮಿಥುನ್‌ ಮಂಜುನಾಥ್‌ ತನಗಿಂತ ಉನ್ನತ ರ್‍ಯಾಂಕಿಂಗ್‌ನ ಡೆನ್ಮಾರ್ಕ್‌ ಆಟಗಾರ ವಿಕ್ಟರ್‌ ಸ್ವೆಂಡ್ಸೆನ್‌ ಅವರನ್ನು ಭಾರೀ ಹೋರಾಟದ ಬಳಿಕ 24-22, 25-23 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇವರ ಮುಂದಿನ ಎದುರಾಳಿ ತೈಪೆಯ ಯು ಜೆನ್‌. 5ನೇ ಶ್ರೇಯಾಂಕದ ರಾಸ್ಮಸ್‌ ಜೆಮೆR ದ್ವಿತೀಯ ಗೇಮ್‌ ವೇಳೆ ಗಾಯಾಳಾಗಿ ಹಿಂದೆ ಸರಿದುದರಿಂದ ಯು ಜೆನ್‌ ಮುನ್ನಡೆ ಕಾಣುವಂತಾಯಿತು. ಮೊದಲ ಗೇಮ್‌ ಜೆಮೆR ಪಾಲಾಗಿತ್ತು. ಪ್ರಿಯಾಂಶು ರಾಜಾವತ್‌ ತಮ್ಮದೇ ದೇಶದ ಕಿರಣ್‌ ಜಾರ್ಜ್‌ ಅವರನ್ನು 21-18, 21-13ರಿಂದ ಮಣಿಸಿದರು. ಆದರೆ ಭಾರತೀಯನ ಮುಂದಿನ ಸವಾಲು ಸುಲಭದ್ದಲ್ಲ. ಇಲ್ಲಿ ಅವರು ಜಪಾನಿನ ಅಗ್ರ ಶ್ರೇಯಾಂಕದ ಕೆಂಟ ನಿಶಿಮೊಟೊ ವಿರುದ್ಧ ಸೆಣೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next