Advertisement

UV Fusion: ಕಾಂಕ್ರೀಟ್‌ ಅಲ್ಲ ಸ್ವಾಮಿ ಇದು ಉಪ್ಪಿಟ್ಟು

09:55 AM Sep 18, 2023 | Team Udayavani |

ಉಪ್ಮಾ ಎಂದರೆ ಕೆಲವರಿಗೆ ಪರಮ ಅಸಹ್ಯ, ಇನ್ನು ಕೆಲವರಿಗೆ ಬಲು ಇಷ್ಟ. ರವೆ ರವೆಯಾಗಿ ಎಣ್ಣೆ ನೀರಿನಲ್ಲಿ ಬೆಂದು ಘನವಾಗಿ ರುಚಿಕಟ್ಟದ ರೂಪ ತೆಗೆದುಕೊಳ್ಳುವ ಈ ಉಪ್ಪಿಟ್ಟು ಎಲ್ಲರ ಮನ ಗೆಲ್ಲುವುದು ಇದೆ.

Advertisement

ಈ ಪ್ರವೃತ್ತಿಯಲ್ಲಿ ವಿಶೇಷ ಸಂಗತಿ ಏನಪ್ಪಾ ಅಂದರೆ ಹೊಟೇಲ್‌ಗೆ ಹೋಗಿ ಮೆನು ಕೇಳಿದರೆ ಆ ಪಟ್ಟಿಯಲ್ಲಿ ಉಪ್ಪಿಟ್ಟಿನ ಹೆಸರೇ ಇರುವುದು ಇಲ್ಲ! ಆದರೆ ಮುಂಚೆ ಉಪ್ಪಿಟ್ಟಿಗೆ ಇಂದಂಥ ಬೇಡಿಕೆ ಬೇರೆ ಯಾವುದೇ ಉಪಹಾರಕ್ಕೂ ಇರಲಿಲ್ಲ. ಇಡ್ಲಿ, ಪುಳಿಯೋಗರೆ, ಪೊಂಗಲ್‌ ಬರುವುದಕ್ಕೂ ಮುಂಚೆ ಉಪ್ಪಿಟ್ಟು ನೆಲೆಯೂರಿತ್ತು.

ಇನ್ನು ಉಪ್ಪಿಟ್ಟಿನ ಹುಟ್ಟು ತಿಳಿಯುವುದು ಆದರೆ ಇದು ಒಂದು ರೀತಿ ವಿಚಿತ್ರವಾಗಿದೆ ಕೆಲವರು ಹೇಳುತ್ತಾರೆ ಉಪ್ಪಿಟ್ಟು ಮೊದಲು ಉಡುಪಿಯಲ್ಲಿ ಜನನಗೊಂಡಿತು ಎಂದು, ಇನ್ನು ಕೆಲವರು ತಮಿಳುನಾಡು ಎಂದು ಹೇಳುವರು. ಆದರೆ ಇದು ನಮ್ಮ ನಿಮ್ಮ ಎಲ್ಲರ ಹುಟ್ಟಿಗೂ ಮುಂಚೆ ಹುಟ್ಟಿದು. ಇದರ ಹುಟ್ಟಿನ ರಹಸ್ಯ ತಿಳಿಯಲು ನಾವು ಎರಡನೇ ಮಹಾಯುದ್ಧ ಸಮಯಕ್ಕೆ ಹಿಂತಿರುಗಬೇಕು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದಕ್ಷಿಣ ಭಾರತಕ್ಕೆ ಒಂದು ಅಸಾಧಾರಣ ಸಮಸ್ಯೆ ಎದುರಾಯಿತು. ಆಗಿನ ಬ್ರಿಟಿಷ್‌ ಸರಕಾರವು ಮದ್ರಾಸ್‌ ಪ್ರಸಿಡೆನ್ಸಿಯಲ್ಲಿ ಕೊಯ್ಲು ಮಾಡದಂತಹ ಅಕ್ಕಿಯನ್ನು ಹೆಚ್ಚಿನ ಪ್ರಮಾಣವನ್ನು ಯುದ್ಧದಲ್ಲಿ ಹೋರಾಡುವ ಸೈನಿಕರಿಗೆ ಹಂಚಲು ಪ್ರಾರಂಭಿಸಿತು ಈ ರೀತಿ ಹೆಚ್ಚಾಗಿ ಹಂಚಿದೆ ಕಾರಣ ಮದ್ರಾಸ್‌ ರಾಜ್ಯದಲ್ಲಿ ತೀರಾ ಅಕ್ಕಿಯ ಕೊರತೆ ಶುರುವಾಯಿತು.

ಅಕ್ಕಿ ಕೊರತೆಯನ್ನು ಪರಿಹರಿಸಲು, ಬ್ರಿಟಿಷರು ಬರ್ಮಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. ಅನಂತರ ಜಪಾನ್‌ ವ್ಯೂಹಾತ್ಮಕ ರೀತಿಯಲ್ಲಿ ಬರ್ಮಾ ಮೇಲೂ ದಾಳಿ ನಡೆಸಿ ಆ ದೇಶವನ್ನು ಆಕ್ರಮಣ ಮಾಡಿತು, ಇದು ಮದ್ರಾಸಿನಲ್ಲಿ ಅಕ್ಕಿ ಕೊರತೆಯನ್ನು ಉಲ್ಬಣಗೊಳಿಸಿತು.

Advertisement

ಆ ಸಮಯದಲ್ಲಿ ಬ್ರಿಟಿಷರಿಗೆ ಒಂದು ಉಪಾಯ ಹೊಳೆಯಿತು ಅದುವೇ ಅಕ್ಕಿಗೆ ಬದಲು ಗೋಧಿಯನ್ನು ದಕ್ಷಿಣಾದಿಯವರ ಆಹಾರದಲ್ಲಿ ಕಲಬೆರಿಕೆ ಮಾಡಿದರೆ ಆಹಾರ ಕೊರತೆಯನ್ನು ಕಡಿಮೆಯಾಗುತ್ತದೆಂದು ಭಾವಿಸಿ ಗೋಧಿಯನ್ನು ಉತ್ತರ ಭಾರತದಿಂದ ಆಮದು ಮಾಡಿಕೊಂಡು ಇವು ಅಕ್ಕಿಗಿಂತ ದುಪ್ಪಟ್ಟು ಪೌಷ್ಟಿಕಾಹಾರ ಎಂದು ಪ್ರಚಾರ ಮಾಡಲಾಯಿತು.

ಆದರೆ ಆ ದಿನಗಳಲ್ಲಿ ಅಕ್ಕಿಗೆ ಅಭ್ಯಾಸವಾಗಿದ ಪ್ರಾಂತ್ಯದವರಿಗೆ ಗೋಧಿಯನ್ನು ಹಿಟ್ಟು ಮಾಡಿ ರೊಟ್ಟಿ ಸುಡುವುದು ತುಂಬಾ ಶ್ರಮದಾಯಕ ಕೆಲಸ ಅನಿಸಿತು. ಆದ್ದರಿಂದ ಜನರಲ್ಲಿ ಗೋಧಿ ಸೇವನೆಯ ಉಪಾಯ ಯಶಸ್ವೀ ಗೊಳ್ಳಲಿಲ್ಲ. ಗೋಧಿಯನ್ನು ಕೂಡ ಅಕ್ಕಿಯ ಹಾಗೇ ಬೇಯಿಸಿ ಸುಲಭವಾಗಿ ತಿನ್ನಬಹುದಾದ ಪರ್ಯಾಯಗಳ ಬಗ್ಗೆ ಪರಿಶೀಲಿಸಿದಾಗ ದುರುಮ… (ಇದು ಗೋಧಿಯ ಒಂದು ಬಗೆ ) ಇದು ಬಹಳ ಗಟ್ಟಿಯಾಗಿ ಇದ್ದು ಸುಲಭವಾಗಿ ಪುಡಿಮಾಡಲಾಗದ ರೀತಿಯದ್ದಾಗಿದೆ ಎಂದು ಅವರು ಕಂಡುಕೊಂಡರು. ಇವುಗಳನ್ನು ತರಿತರಿಯಾಗಿ ರವೆ ಮಾಡಿ ಮಾರುಕಟ್ಟೆಗೆ ಬಿಡಲಾಯಿತು. ಇದು ತುಂಬಾ ರುಚಿಕರ ಮತ್ತು ಪೌಷ್ಟಿಕವಾಗಿದೆ ಎಂದು ಬ್ರಿಟಿಷರು ಪ್ರಚಾರ ಮಾಡಿದರು.

ಬ್ರಿಟಿಷರು ಭಾರತೀಯ ಪಾಕಪದ್ಧತಿಯಲ್ಲಿ ಅದನ್ನು ಹೇಗೆ ಬಳಸಬೇಕೆಂಬುದರ ಕುರಿತು ಪಾಕಶಾಲೆಯ ತರಬೇತಿ ಕಾರ್ಯಕ್ರಮಗಳನ್ನು ಸಹಾ ನಡೆಸಿ¨ªಾರೆ. ಈ ರೀತಿ ರವೆ ಉಪ್ಪಿಟ್ಟಾಗಿ ರೂಪಾಂತರವಾಗಿ ಪೊಂಗಲ್‌ ಅನ್ನು, ಇಡ್ಲಿಯನ್ನು ಎಸೆದುಹಾಕಿ ಹಲವು ವರ್ಷಗಳ ಕಾಲ ಹೊಟೇಲ್‌ ಮೆನೂಗಳಲ್ಲಿ ಸಿಂಹಾಸನವನ್ನೇರಿತು ಉಪ್ಪಿಟ್ಟು ಎಂದರೆ ಕಾಂಕ್ರೀಟ್‌ ಪೊಂಗಲ್‌ ಇಡ್ಲಿ ಎಂದರೆ ಸ್ವೀಟ್‌ ಹಾರ್ಟ್‌ ಎಂದು ಹೇಳುವುದು ಕಂಡಲ್ಲಿ ಈ ಕಥೆಯನ್ನು ವಿಧವಾಗಿ ತಿಳಿಸಿ ಹೇಳಿರಿ. ಆಹಾರ ರಾವನೆ ಯಾವಾದ ಸಮಯದಲ್ಲಿ ಜನರ ಜೀವ ಉಳಿಸಿದ ಉಪ್ಪಿಟ್ಟನು ನೀವು ಹೇಗೆ ನಿರ್ಲಕ್ಷ ಮಾಡುವಿರಿ?

-ರಕ್ಷಿತ್‌ ಆರ್‌. ಪಿ.

ಎಂ.ಜಿ.ಎಂ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next