Advertisement

ಬೂತ್‌ ಮಟ್ಟದಿಂದ ಜೆಡಿಎಸ್‌ ಪಕ್ಷ ಸಂಘಟಿಸಿ

04:10 PM Nov 08, 2022 | Team Udayavani |

ದೇವನಹಳ್ಳಿ: ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಮಸ್ಯೆಗಳಾಗುತ್ತಿದ್ದು, ಸರ್ಕಾರದ ಗಮನಕ್ಕೆತಂದರೂ ಪ್ರಯೋಜನವಿಲ್ಲ. ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕ ಎಲ್‌.ಎನ್‌ .ನಾರಾಯಣ ಸ್ವಾಮಿ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಎಸ್‌ಟಿಘಟಕದಿಂದ ನಡೆದ ದೇವನಹಳ್ಳಿ ವಿಧಾನಸಭಾಕ್ಷೇತ್ರದ ಎಸ್‌ಟಿ ಘಟಕದ ಕಾರ್ಯಕರ್ತರ ಸಭೆಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ರಸ್ತೆಗಳು ಗುಂಡಿಬಿದ್ದು,ಸಾಕಷ್ಟು ಜನ ಗಾಯಗಳಾಗುತ್ತಿವೆ. ವಿಧಾನಸಭೆಕಲಾಪದಲ್ಲಿ ಗುಂಡಿಗಳ ಸಂಬಂಧಪಟ್ಟಂತೆ ಚರ್ಚೆ ನಡೆಸಿ, ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಜಾಗ ಕಬಳಿಸಲು ನಾವು ಬಿಡಲ್ಲ: ವಾಲ್ಮೀಕಿ ಅಧ್ಯಯನ ಪೀಠಕ್ಕೆ ಮೀಸಲಿರುವ ಜಾಗವಾಗಿದೆ. ಜಾಗವನ್ನು ಕಬಳಿಸಲು ನಾವು ಬಿಡುವುದಿಲ್ಲ ಎಂದು ಪಕ್ಷದ ಅಧ್ಯಕ್ಷರೊಂದಿಗೆ ಭೇಟಿ ನೀಡಿ, ಆ ಜಾಗವನ್ನು ಭದ್ರಗೊಳಿಸಲಾಗಿದೆ. ಅಧ್ಯಯನ ಪೀಠ ಬೇರೆಡೆ ಸ್ಥಾಪನೆಮಾಡುವ ಬಗ್ಗೆ ನನ್ನ ಗಮನಕ್ಕೆ ಬಂದಾಗ, ನಾನು ಸಂಬಂಧಪಟ್ಟ ಸದನದಲ್ಲಿ ಧ್ವನಿಯೆತ್ತುವುದರಮೂಲಕ ಗುರ್ತಿಸಿರುವ ಜಾಗವನ್ನೇ ಮೀಸಲಿಡಲು ಚರ್ಚಿಸಲಾಗಿದೆ. ಸಮಾಜದ ಮುಖಂಡರು, ಕಾರ್ಯಕರ್ತರು ಜೆಡಿಎಸ್‌ ಪಕ್ಷವನ್ನು ಬೂತ್‌ ಮಟ್ಟದಲ್ಲಿ ಸದೃಢಗೊಳಿಸಬೇಕು. ಪ್ರತಿಯೊಬ್ಬರು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಪಕ್ಷವಿದ್ದರೆ, ನಾವಿದ್ದಹಾಗೇ ಈಗಾಗಲೇ ವಾಲ್ಮೀಕಿ ಭವನದಕ್ಕೆ ಸಚಿವ ಶ್ರೀರಾಮಲು ಅವರ ಬಳಿ 1.5 ಕೋಟಿ ರೂ. ಅನುದಾನ ತರಲು ಶ್ರಮಸಲಾಗಿದ್ದ ಫ‌ಲವಾಗಿ ಇದೀಗ ಭವನ ನಿರ್ಮಾಣವಾಗಿದೆ. ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಭವನದ ಉದ್ಘಾಟನೆಗೆ ಸಚಿವರ ಬಳಿ ಹೋಗಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಬಹುಮತದೊಂದಿಗೆ ಅಧಿಕಾರ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಆಕಾಂಕ್ಷಿ ರವೀಶ್‌ ಮಾತನಾಡಿ, 1994ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಾಯಕ ಸಮುದಾಯವನ್ನು ಎಸ್‌ಟಿಗೆ ಮೀಸಲು ಸೇರಿಸಿದ್ದರಿಂದ ಪ್ರತಿಯೊಬ್ಬರೂ ರಾಜಕೀಯವಾಗಿ ಅವಕಾಶ ಸಿಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತ್ತಿದ್ದೇನೆ. ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಡ ಬಂದರೂ ಹೋಗುವುದಿಲ್ಲ. ಒಗ್ಗಟ್ಟಿನಿಂದ ಎಲ್ಲರೂ ದುಡಿದು ಈ ಬಾರಿ ದೇವನಹಳ್ಳಿ ಕ್ಷೇತ್ರದಲ್ಲಿ ಶಾಸಕರನ್ನು ಗೆಲ್ಲಿಸಿ, ಜೆಡಿಎಸ್‌ ಅನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮುನೇಗೌಡ ಮಾತನಾಡಿ, ಪ್ರತಿ ಬೂತ್‌ ಮಟ್ಟದಿಂದ ಪಕ್ಷಸಂಘಟಿಸಬೇಕು. ಬೂತ್‌ ಮಟ್ಟದಲ್ಲಿ ಇರುವಕೊರತೆಗಳ ಬಗ್ಗೆ ತಿಳಿದುಕೊಳ್ಳಬೇಕು. ತಾಲೂಕಿನಲ್ಲಿ ಶಾಸಕರು ಉತ್ತಮ ಕಾರ್ಯ ಮಾಡಿದ್ದಾರೆ. ಶಾಸಕರನ್ನು ಮತ್ತೆ ಗೆಲ್ಲಿಸಿಕೊಳ್ಳಬೇಕು ಎಂದರು.

Advertisement

ಜೆಡಿಎಸ್‌ ಎಸ್‌ಟಿ ಘಟಕದ ಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ತಾಲೂಕು ಟಿಎಪಿಸಿಎಂಎಸ್‌ನ ಅಧ್ಯಕ್ಷ ದೇವರಾಜ್‌, ನಿರ್ದೇಶಕ ರಮೇಶ್‌, ಮಾಳಿಗೇನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ವೆಂಕಟೇಶ್‌ ಮೂರ್ತಿ, ಜಿಲ್ಲಾ ಜೆಡಿಎಸ್‌ ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್‌,ರಾಮಣ್ಣ, ಗ್ರಾಪಂ ಸದಸ್ಯರಾದ ಮುಕುಂದ, ಶ್ರೀ ನಿವಾಸ್‌, ದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಮಂಡಿ ಬೆಲೆಗ್ರಾಪಂ ಅಧ್ಯಕ್ಷೆ ಅಂಬಿಕಾ, ಮುಖಂಡರಾದ ಶಾಮಣ್ಣ, ಮುನಿರಾಜು, ಮೀಸಗಾನಹಳ್ಳಿ ಶಿವಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next