Advertisement

ಸಂಸ್ಥೆಗಳು ನಿಸ್ವಾರ್ಥ ಸೇವೆ ಸಲ್ಲಿಸಲಿ: ತಂಗಡಗಿ ಶ್ರೀ

03:14 PM Dec 04, 2017 | |

ಮುದ್ದೇಬಿಹಾಳ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಘ, ಸಂಸ್ಥೆಗಳು ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ
ಮಾಡಬೇಕು ಎಂದು ತಂಗಡಗಿಯ ಹಡಪದ ಅಪ್ಪಣ್ಣ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು ಹೇಳಿದರು.
ಅವರು ಪ್ರಗತಿ ಶಾಲೆಯಲ್ಲಿ ನಡೆದ ಜೆ.ಸಿ. 2018 ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಈ ಶರೀರವಿರುವುದೇ ಸಮಾಜ ಸೇವೆಗಾಗಿ. ತನ್ನ ಸ್ವಾರ್ಥ ಸಾಧಿಸಿದರೆ ಮನುಷ್ಯ ದೊಡ್ಡವನಾಗುವುದಿಲ್ಲ. ಜೆ.ಸಿ.
ಸಂಸ್ಥೆ 15 ವರ್ಷಗಳಲ್ಲಿ ಮಾಡಿದ ಸೇವಾ ಕಾರ್ಯಗಳು ಹಾಗೂ ಸಾಧಿಸಿದ ಪ್ರಗತಿ ದೊಡ್ಡದು ಎಂದವರು ಹೇಳಿದರು.

ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ್ರ ಮಾತನಾಡಿ, ಜೆಸಿ ಸಂಸ್ಥೆಯಲ್ಲಿ ಜಾತಿ, ಮತ, ಧರ್ಮ ಮೀರಿದ ಸಮಾಜ ಸೇವೆ ನಡೆಯುತ್ತದೆ. ಇಲ್ಲಿಯ ಸದಸ್ಯರ ಒಮ್ಮನಸ್ಸಿನ ಕೆಲಸ ಇತರ ಸಂಘ, ಸಂಸ್ಥೆಗಳಿಗೆ ಮಾದರಿ ಎಂದರು.

ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಲಯ 24ರ ನಿರ್ದೇಶಕ ಮಂಡಳಿಯ ಸದಸ್ಯೆ ಸವಿತಾ ರಮೇಶ
ಮಾತನಾಡಿದರು. ನೂತನ ಅಧ್ಯಕ್ಷರಾದ ಶ್ರೀನಿವಾಸ ಇಲ್ಲೂರ, ಕಾರ್ಯದರ್ಶಿ ರವಿ ಗೂಳಿ, ಉಪಾಧ್ಯಕ್ಷರಾದ ಮಹಾಬಲೇಶ ಗಡೇದ, ಶರಣು ಸಜ್ಜನ, ಸಂಗಮೇಶ ನಾವದಗಿ, ಮಾರುತಿ ನಲವಡೆ, ಸುನೀಲ ಇಲ್ಲೂರ, ಸಹ
ಕಾರ್ಯದರ್ಶಿ ಸುರೇಶ ಕಲಾಲ, ಖಜಾಂಚಿ ರಾಜು ಕರಡ್ಡಿ, ನಿರ್ದೇಶಕ ಮಂಡಳಿ ಸದಸ್ಯರಾದ ವಿಲಾಸ ದೇಶಪಾಂಡೆ, ಡಾ| ಉತ್ಕರ್ಷ ನಾಗೂರ, ಅರವಿಂದ ಲದ್ದಿಮಠ, ಭರತ ಭೋಸಲೆ, ಪಂಕಜ ಪೋರವಾಲ, ಅಪ್ಪು ಪೂಜಾರಿ ಹಾಗೂ ಲಾಡ್ಲೆಮಶ್ಯಾಕ ನಾಯ್ಕೋಡಿ ಅವರಿಗೆ ವಲಯ 24ರ ಉಪಾಧ್ಯಕ್ಷ ಅರವಿಂದಕುಮಾರ ಬುರೆಡ್ಡಿ ಸೇವಾ ಪ್ರತಿಜ್ಞಾವಿಧಿ ಬೋಧಿಸಿದರು.

ವೇದಿಕೆಯಲ್ಲಿ ಇಲಕಲ್ಲನ ಸಿಲ್ಕ್ ಸಿಟಿ ಜೆ.ಸಿ. ಸಂಸ್ಥೆ ಅಧ್ಯಕ್ಷೆ ಮಂಜುಳಾ ತೋಟಗೇರಿ, ಕಾರ್ಯದರ್ಶಿ ಅಪ್ಪು
ಪೂಜಾರಿ ಉಪಸ್ಥಿತರಿದ್ದರು. ಡಾ| ಉತ್ಕರ್ಷ ನಾಗೂರ ಜೆಸಿ ವಾಣಿ ಓದಿದರು. ಸಂಗಮೇಶ ನಾವದಗಿ ಸ್ವಾಗತಿಸಿದರು.
ಡಾ| ವೀರೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಅಧ್ಯಕ್ಷ ಮುರಳಿಕೃಷ್ಣ ಬುಡ್ಡೋಡಿ 2017 ನೇ ಸಾಲಿನ ವರದಿ ವಾಚನ ಮಾಡಿದರು. ಪ್ರೊ| ಎಸ್‌.ಎಸ್‌. ಹೂಗಾರ
ಹಾಗೂ ಮಹಾಬಲೇಶ ಗಡೇದ ನಿರೂಪಿಸಿದರು. ಡಾ| ರಹೀಮ ಮುಲ್ಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next