Advertisement

ಕವಿಸಂನಿಂದ ಗ್ರಾಮಮಟ್ಟದಲ್ಲಿ ಕಾರ್ಯಕ್ರಮಗಳ ಆಯೋಜನೆ

01:04 PM Dec 11, 2021 | Team Udayavani |

ಧಾರವಾಡ: ಕನ್ನಡ ನಾಡು,ನುಡಿ ಜತೆಗೆ ದತ್ತಿ ಕಾರ್ಯಕ್ರಮಗಳು ಸೇರಿ ವಿಭಿನ್ನ ವಿಚಾರಗಳನ್ನು ಜನರಿಗೆ ತಲುಪಿಸಲು ಗ್ರಾಮ ಮಟ್ಟದಲ್ಲಿಕಾರ್ಯಕ್ರಮಗಳನ್ನು ಆಯೋಜಿಲಾಗುವುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸಮಾನ ಮನಸ್ಕರ ಒಕ್ಕೂಟದಿಂದ ಸ್ಪರ್ಧಿಸಿನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.

Advertisement

ಕವಿಸಂಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಒಕ್ಕೂಟದಿಂದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಈಗಾಗಲೇ ಕವಿಸಂ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ತಳಸ್ಪರ್ಶಿಯಾಗಿ ವಿಸ್ತರಿಸುವ ಕುರಿತು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ಇಲ್ಲಿ ಒಟ್ಟು 9 ಮಂಟಪಗಳಿದ್ದು, ಅವುಗಳ ಕಾರ್ಯಕ್ರಮಗಳು ಮತ್ತು ದತ್ತಿ ಕಾರ್ಯಕ್ರಮಗಳನ್ನು ಈ ಬಾರಿಹೊರ ಜಿಲ್ಲೆಗಳು, ಹೊರ ತಾಲೂಕುಗಳುಮತ್ತು ಗ್ರಾಮೀಣ ಮಟ್ಟದಲ್ಲೂ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತೇವೆ. ಕನ್ನಡ ನಾಡು ನುಡಿ ವಿಚಾರಗಳ ಜತೆಗೆ ಸಾಹಿತ್ಯ, ಸಂಸ್ಕೃತಿ ಮತ್ತು ಜನಮಾನಸದಲ್ಲಿನ ಸಮಸ್ಯೆಗಳಿಗೂ ಕವಿಸಂ ಧ್ವನಿಯಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾದ ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.

ಉಪಾಧ್ಯಕ್ಷರಾದ ಡಾ|ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡದ ವಿಚಾರಗಳು ಅಷ್ಟೇಯಲ್ಲ ಇಂದು ಗಡಿನಾಡಿನಲ್ಲಿರುವ ಮತ್ತು ಹೊರ ರಾಜ್ಯಗಳಲ್ಲಿನ ಕನ್ನಡಿಗರ ಸಮಸ್ಯೆಗಳು ಸಾಕಷ್ಟು ಇವೆ. ಅವುಗಳಿಗೂ ಕವಿಸಂ ಸ್ಪಂದಿಸಲಿದ್ದು, ಕನ್ನಡ ವಿರೋಧಿಗಳಿಗೆ ಖಂಡಿತಾ ತಕ್ಕ ಉತ್ತರ ನೀಡುತ್ತೇವೆ ಎಂದರು.

ಕಾ.ಕಾ.ಸಮಿತಿ ಸದಸ್ಯ ಡಾ|ಸಂಜೀವ ಕುಲಕರ್ಣಿ ಮಾತನಾಡಿ, ನಾವು ಚುನಾವಣೆಆಗುವವರೆಗೂ ನಾವೆಲ್ಲ ಬೇರೆ ಬೇರೆ ಬಣಗಳಲ್ಲಿದ್ದೆವು. ಇದೀಗ ಆಯ್ಕೆಯಾದಮೇಲೆ ನಾವೆಲ್ಲರೂ ಒಂದೇ ಬಣ. ಈನಿಟ್ಟಿನಲ್ಲಿ ನೂತನ ಅಧ್ಯಕ್ಷರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಕವಿಸಂ ಕಾರ್ಯಗಳನ್ನು ಮಾಡುತ್ತೇವೆ ಎಂದರು.

Advertisement

ಸಮಾನ ಮನಸ್ಕರ ಒಕ್ಕೂಟದ ಇತರೆ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಡಾ|ಶಶಿಧರ್‌ತೋಡಕರ್‌, ಡಾ|ಶೈಲಜಾ ಅಮರಶೆಟ್ಟಿ,ಸವಿತಾ ಕುಸುಗಲ್‌, ರವಿ ಕುಲಕರ್ಣಿ, ಬಿ.ಮಾರುತಿ,ನಿಂಗಣ್ಣ ಕುಂಟಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.

ನಾಳೆ ಕವಿಸಂ ಸಾಮಾನ್ಯ ಸಭೆ :

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 120ನೇ ವಾರ್ಷಿಕ ಸರ್ವ ಸದಸ್ಯರ ಸಾಧಾರಣ ಸಭೆ ಡಿ.12ರಂದು ಬೆಳಿಗ್ಗೆ 10:30 ಗಂಟೆಗೆ ನಗರದ ಕವಿಸಂನಲ್ಲಿ ನಡೆಯಲಿದೆ. ಎಲ್ಲ ಸದಸ್ಯರು ವೇಳೆಗೆ ಸರಿಯಾಗಿ ಆಗಮಿಸಬೇಕು. ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಘದ ಪ್ರಧಾನಕಾರ್ಯದರ್ಶಿ ಪ್ರಕಾಶ ಎಸ್‌. ಉಡಿಕೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕವಿಸಂನಲ್ಲಿರುವ ಗ್ರಂಥಾಲಯವನ್ನು ಇನ್ನಷ್ಟು ಸುಸಜ್ಜಿತ ಗ್ರಂಥಾಲಯವನ್ನಾಗಿ ಮಾಡಿ ಅಭಿವೃದ್ಧಿ ಪಡೆಸಲಾಗುವುದು. ಜತೆಗೆ ಇಡೀ ಕವಿಸಂನಲ್ಲಿ ಆಗಬೇಕಿರುವ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣವೇ ಚಾಲನೆ ನೀಡಿ ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಬಸವಪ್ರಭು ಹೊಸಕೇರಿ, ನೂತನ ಕಾರ್ಯಾಧ್ಯಕ್ಷ, ಕವಿಸಂ

Advertisement

Udayavani is now on Telegram. Click here to join our channel and stay updated with the latest news.

Next