Advertisement
ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟ (ಕೆಐಟಿಯು) ರಚನೆಯಾಗಿದೆ. ಕಾರ್ಮಿಕ ಸಂಘಟನೆಗಳ ಕಾಯ್ದೆ 1926 ಮತ್ತು ಕರ್ನಾಟಕ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಿಯಂತ್ರಣ ಕಾಯ್ದೆ 1958ರ ಅನ್ವಯ ಅದನ್ನು ನೋಂದಣಿ ಮಾಡಲಾಗಿದೆ. ಈ ಬಗ್ಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೀತ್ ವಕೀಲ್ ಮಾಹಿತಿ ನೀಡಿದ್ದಾರೆ.
Related Articles
Advertisement
ಅದರ ಮೂಲಕ ಹಲವು ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ವಕೀಲ್ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಒಕ್ಕೂಟಕ್ಕೆ ಸಿಪಿಎಂ ಬೆಂಬಲಿತ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದಿದ್ದಾರೆ.
ಐಟಿ ಕ್ಷೇತ್ರದಲ್ಲಿ ಸಮಸ್ಯೆಗೆ ಒಳಗಾದ ಉದ್ಯೋಗಿಗಳೆಲ್ಲ ಫೋರಂ ಫಾರ್ ಐಟಿ ಎಂಪ್ಲಾಯೀಸ್ (ಎಫ್ಐಟಿಇ), ನ್ಯಾಷನಲ್ ಡೆಮಾಕ್ರಾಟಿಕ್ ಲೇಬರ್ ಫ್ರಂಟ್- ಐಟಿ (ಎಲ್‌ಡಿಎಲ್‌ಎಫ್-ಐಟಿ), ಯೂನಿಯನ್ ಫಾರ್ ಐಟಿ/ಐಟಿಇಎಸ್ (ಯುಎನ್‌ಐಟಿಇಎಸ್) ಎಂಬ ಸಂಘಟನೆಗಳ ಮೊರೆ ಹೋಗುತ್ತಿದ್ದರು.
ಗಮನಾರ್ಹ ಅಂಶವೆಂದರೆ ಜೂನ್‌ನಲ್ಲಿ ನಾಸ್ಕಾಂ ನೀಡಿದ ಮಾಹಿತಿಯಂತೆ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ವಿಶೇಷವಾಗಿ ರಪು¤ ಶೇ.7-8ರ ಪ್ರಮಾಣದಲ್ಲಿಯೇ ಇದ್ದೀತು ಎಂದು ಮುನ್ಸೂಚನೆ ನೀಡಿತ್ತು. ದೇಶದಲ್ಲಿನ ನಾಲ್ಕು ಪ್ರಮುಖ ಐಟಿ ಕಂಪನಿಗಳು ಮುಂದಿನ ದಿನಗಳಲ್ಲಿ 12 ರಿಂದ 15 ಸಾವಿರ ಮಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ನಾಸ್ಕಾಂನ ವರದಿ ಪ್ರಕಾರ ಕಳೆದ ಹಣಕಾಸಿನ ವರ್ಷದಲ್ಲಿ 1,70,000 ಮಂದಿಯನ್ನು ಉದ್ಯೋಗಕ್ಕೆ ಸೇರ್ಪಡೆ ಮಾಡಿಕೊಂಡಿವೆ. ಹಾಲಿ ಹಣಕಾಸು ವರ್ಷದಲ್ಲಿ 1,50,000 ಮಂದಿಯನ್ನು ಸೇರ್ಪಡೆಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಯಾಗಿರುವ ಒಕ್ಕೂಟದ ಬಗ್ಗೆ ಮತ್ತು ಅದರಿಂದ ಉಂಟಾಗಬಹುದಾದ ಪ್ರಭಾವದ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಸಬೇಕಾಗಿದೆ ಎಂದು ಹೇಳಿದೆ.