Advertisement
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗಾಗಿ “ತ್ಯಾಗ’ ಮಾಡಿದವರ ಆಶೋತ್ತರಗಳಿಗೆ ಸಿಎಂ ಯಡಿಯೂರಪ್ಪ ಸೇರಿ ಸಂಪುಟ, ಸರ್ಕಾರ ಸ್ಪಂದಿಸುತ್ತಿದೆ ಎಂಬ ಮಾತಿದೆ. ಸದ್ಯ ಎದುರಾಗಿರುವ ಉಪಚುನಾವಣೆಗೆ ಹಿಂದಿನ ಚುನಾವಣೆಗಳಲ್ಲಿ ಪ್ರತಿಸ್ಪರ್ಧಿಯಾಗಿದ್ದವರೇ ಅಭ್ಯರ್ಥಿ ಯಾ ದರೆ ಇಲ್ಲವೇ ಅವರ ಆಪೆ¤àಷ್ಟರು ಅಭ್ಯರ್ಥಿ ಯಾದರೆ ಹೇಗೆ ಸಂಘಟನೆ ಸ್ಪಂದಿಸಲಿದೆ ಎಂಬ ಕುತೂ ಹಲ ಮೂಡಿದೆ. ಸಂಘಟನೆಯ ವಿಶ್ವಾಸ ಗಳಿಸಿಕೊಂಡು ಮುಂದೆ ತಲೆ ಎತ್ತಬಹುದಾದ ಭಿನ್ನಮತ ಭುಗಿಲೇಳ ದಂತೆ ನಿಯಂತ್ರಿಸಿ ಗೆಲುವಿನ ದಡ ಸೇರಬೇಕಾದ ಸವಾಲು ರಾಜ್ಯ ಬಿಜೆಪಿ ನಾಯಕರ ಮುಂದಿದೆ.
Related Articles
Advertisement
ಒಂದೊಮ್ಮೆ ಅನರ್ಹಗೊಂಡ ಶಾಸಕರಿಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರು ಸೂಚಿಸಿದವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿಯಿದೆ. ಇದು ಸಹ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಬಿಜೆಪಿ ಸರ್ಕಾರ ರಚನೆ ಗಾಗಿ ತ್ಯಾಗ ಮಾಡಿದರು ಎಂಬ ಕಾರಣಕ್ಕೆ ಅನರ್ಹತೆ ಗೊಂಡ ಶಾಸಕರು ಕಣಕ್ಕಿಳಿದರೆ ಒಪ್ಪಬಹುದೇನೋ. ಆದರೆ ಅವರ ಕುಟುಂಬದವರು ಇಲ್ಲವೇ ಅವರು ಸೂಚಿಸಿದವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದರೆ ಕಾರ್ಯಕರ್ತರ ಗತಿಯೇನು ಎಂಬ ಹಲವೆಡೆ ಪ್ರಶ್ನಿಸಲಾರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಘಟನೆಯ ಕೆಲವರಿಂದ ವಿರೋಧ: 15 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಅನರ್ಹತೆಗೊಂಡ ಶಾಸಕರು ಅಭ್ಯರ್ಥಿಗಳಾಗಲು ಇಲ್ಲವೇ ಅವರ ಕುಟುಂಬದವರು ಅಭ್ಯರ್ಥಿಯಾಗಲು ಪಕ್ಷದ ಕಾರ್ಯಕರ್ತರು, ಸಂಘಟನೆಯ ಕೆಲವರ ವಿರೋಧವಿದೆ. ಹಿರೇಕೆರೂರು, ಯಲ್ಲಾಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರ, ಶಿವಾಜಿನಗರ ಸೇರಿ ಕೆಲ ಕ್ಷೇತ್ರಗಳಲ್ಲಿ ತೀವ್ರ ಅಪಸ್ವರ ಕೇಳಿಬಂದಿ ರುವುದು ಗಮನಕ್ಕೆ ಬಂದಿದೆ. ಹಾಗೆಂದು ಯಾರೊಬ್ಬರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಹಿರಿಯ ನಾಯಕರು ಸಂಘಟನೆಯ ವಿಶ್ವಾಸವನ್ನು ಗಳಿಸಿ ಮುಂದುವರಿಯಬೇಕಿದೆ ಎಂದು ಬಿಜೆಪಿ ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದರು.
ನಾಯಕರು ಶಿಸ್ತು ಪಾಲಿಸಬೇಕು: ಪಕ್ಷದ ಸಿದ್ಧಾಂತ, ಶಿಸ್ತು ಪರಿಪಾಲಿಸುತ್ತಾ ಎದುರಾಳಿಗಳ ವಿರುದ್ಧ ನ್ಯಾಯಸಮ್ಮತ ಹೋರಾಟ ನಡೆಸಿ ಕೊಂಡು ಬಂದವರ ಮನಸ್ಸಿಗೂ ನೋವಾಗದಂತೆ ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳಬೇಕು. ನಮ್ಮ ಮೂಲ ಸಿದ್ಧಾಂತದಂತೆ ನಡೆಸಿದ ಹೋರಾಟದಿಂದ ಹಿಂದೆ ಸರಿಯುವ ಇಲ್ಲವೇ ರಾಜಿಯಾಗುವಂತಾದರೆ ನಮಗೂ ಇತರೆ ಪಕ್ಷಗಳಿಗೂ ವ್ಯತ್ಯಾಸವಿರದು. ಈ ಅಂಶಗಳನ್ನು ಹಿರಿಯ ನಾಯಕರ ಗಮನಕ್ಕೆ ತರಲಾಗಿದೆ. ಕಾರ್ಯಕರ್ತರಿಗೆ ಶಿಸ್ತು ಹೇಳುವ ನಾಯಕರೂ ಶಿಸ್ತು ಪಾಲನೆಗೆ ಒತ್ತು ನೀಡಬೇಕು ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಕೆಲ ಅಭ್ಯರ್ಥಿಗಳು ಹೇಳಿದ್ದಾರೆ.
* ಎಂ. ಕೀರ್ತಿಪ್ರಸಾದ್